ಮಣೂರು: ಅಡ್ಡ ಬಂದ ದನ – ಬೈಕ್ ಪಲ್ಟಿ, ಸವಾರ ಗಂಭೀರ
ಕುಂದಾಪುರ: ಚಲಿಸುತ್ತಿದ್ದ ಬೈಕಿಗೆ ದನ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಗಂಭೀರ ಗಾಯಗೊಂಡ ಘಟನೆ ಕೋಟ ಸಮೀಪದ ಮಣೂರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ಸಂಜೆ ನಡೆದಿದೆ. ಕೋಟೇಶ್ವರದ ದೊಡ್ಡೋಣಿ ರಸ್ತೆ ನಿವಾಸಿ ರಮೇಶ್ (55) ಗಾಯಗೊಂಡ ಬೈಕ್ ಸವಾರ ಎಂದು ಗುತುತಿಸಲಾಗಿದೆ.
ರಮೇಶ್ ಉಡುಪಿಯಿಂದ ಕೋಟೇಶ್ವರ ಕಡೆಗೆ ಬರುತ್ತಿದ್ದರು. ಮಣೂರು ಸಮೀಪದ ದೊನ್ನೆ ಬಿರಿಯಾನಿ ಅಂಗಡಿ ಸಮೀಪ ದನ ಅಡ್ಡ ಬಂದಿತೆನ್ನಲಾಗಿದೆ. ಅಪಘಾತದಲ್ಲಿ ರಸ್ತೆಗೆ ಬಿದ್ದ ರಮೇಶ್ ತಲೆಗೆ ಗಂಭೀರ ಗಾಯಗಳಾಗಿದ್ದು, ಕೋಟೇಶ್ವರದ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.