ಬೀಜಾಡಿ : ಅಮಾವಾಸ್ಯೆ ರಾತ್ರಿಗಳಲ್ಲಿ ಮಾಟ, ಮಂತ್ರ – ನಾಗಬೊಬ್ಬರ್ಯನ ಪವಾಡದಿಂದ ಸಿಕ್ಕಿಬಿದ್ದ ಅರ್ಚಕ!?
ಕುಂದಾಪುರ : ಅಮವಾಸ್ಯೆಗಳ ರಾತ್ರಿಗಳಲ್ಲಿ ರಸ್ತೆ ವೃತ್ತಗಳಲ್ಲಿ ಮಾಟ, ಮಂತ್ರ ಮಾಡಿಸುತ್ತಿದ್ದ ಅರ್ಚಕನೆನ್ನಲಾದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಬೀಜಾಡಿಯಲ್ಲಿ ನಡೆದಿದೆ.

ಅಮವಾಸ್ಯೆ ಬಂದ್ರೆ ಸಾಕು ಮೂರು ರಸ್ತೆಗಳು ಸಂಧಿಸುವ ಸರ್ಕಲ್‌ಗಳಲ್ಲಿ ಮಾಟ, ಮಂತ್ರ ಮಾಡಿಡಲಾಗುತ್ತಿತ್ತು. ಹಲವು ತಿಂಗಳುಗಳಿಂದ ೀ ಪ್ರಕ್ರಿಯೆ ನಡೆಯುತ್ತಿತ್ತು, ಕುಂಕುಮ, ನಿಂಬೆ ಹಣ್ಣು, ಕುಂಬಳಕಾಯಿ ಹೀಗೇ ಕೃತ್ರಿಮಕ್ಕೆ ಬಳಸಿದ ವಸ್ತುಗಳು ಪತ್ತೆಯಾಗುತ್ತಿದ್ದರೂ ಕೃತ್ರಿಮ ನಡೆಸುತ್ತಿದ್ದ ವ್ಯಕ್ತಿ ಪತ್ತೆಯಾಗಿರಲಿಲ್ಲ. ಇದರಿಂದ ಕಂಗೆಟ್ಟಿದ್ದ ಗ್ರಾಮಸ್ಥರು ಬೀಜಾಡಿಯ ಬಡಾಗಡಿ ಶ್ರೀ ನಾಗಬೊಬ್ಬರ್ಯ ದೇವರ ಮೊರೆ ಹೋಗಿ, ಮುಂದಿನ ಅಮವಾಸ್ಯೆಯ ಒಳಗೆ ಆರೋಪಿಯ ಕುರುಹು ಪತ್ತೆಗಾಗಿ ಪ್ರಾರ್ಥಿಸಿದ್ದರು.

ಸೋಮವಾರ ಸಂಜೆ ಗ್ರಾಮಸ್ಥರು ಅಮವಾಸ್ಯೆಯ ರಾಥ್ರಿಯಲ್ಲಿ ಆರೋಪಿಯ ಪತ್ತೆಗಾಗಿ ಹೊಂಚು ಹಾಕಿ ಕುಳಿತಿದ್ದಾಗ ಬೈಕಿನಲ್ಲಿ ಬಂದ ಯುವಕನೊಬ್ಬ ಬೀಜಾಡಿ ಗ್ರಾಮದ ಹೆಬ್ರಿ ಮನೆ ಸರ್ಕಲ್ ಬಳಿಯಲ್ಲಿ ಮಾಟ ಮಾಡಲಾಗಿದೆಯೆನ್ನಲಾದ ವಸ್ತುಗಳನ್ನು ತಂದಿಡುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾನೆ. ಕೂಡಲೇ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಆರೋಪಿಯನ್ನು ಸೆರೆ ಹಿಡಿದು ಥಳಿಸಿದ್ದಾರೆ. ಗ್ರಾಮಸ್ಥರ ಮುಂದೆ ಆತ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ತಾನು ಅರ್ಚಕ ಎಂದು ಆತ ಹೇಳಿಕೊಂಡಿದ್ದು, ಮೂಲತಃ ಚಿತ್ರದುರ್ಗ ಕಡೆಯವನೆಂದಿದ್ದಾನೆ. ಮಣೂರಿನಲ್ಲಿ ಪತ್ನಿ ಹಾಗೂ ಅತ್ತೆಯ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸವಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಆರಂಭದಲ್ಲಿ ಪುರೋಹಿತರೊಬ್ಬರು ದೃಷ್ಟಿ ತೆಗೆದ ವಸ್ತಿಗಳನ್ನು ಮೂರು ರಸ್ತೆ ಕೂಡುವಲ್ಲಿ ವಿಸರ್ಜಿಸಿ ಬಾ ಎಂದು ನನಗೆ ಇದನ್ನು ಕೊಟ್ಟು ಕಳುಹಿಸುತ್ತಿದ್ದರು ಎಂದಿದ್ದಾನೆನ್ನಲಾಗಿದ್ದು, ಬಳಿಕ ಹೊಟ್ಟೆಪಾಡಿಗಾಗಿ ನಾನು ಮಾಡುತ್ತಿದ್ದೇನೆ ಎಂದಿದ್ದಾನೆ ಎನ್ನಲಾಗಿದೆ. ಬಳಿಕ ಆತನ ಮನೆವರು ಬಂದು ಗೋಗರೆದು ಬೇಡಿಕೊಂಡ ಬಳಿಕ ಗ್ರಾಮಸ್ಥರು ಬಿಟ್ಟಿದ್ದಾರೆ ಎನ್ನಲಾಗಿದೆ. ಅದೇನಿದ್ದರೂ ಸರಿಯಾಗಿ ಒಂದು ತಿಂಗಳು ಕಳೆಯುವ ಮೊದಲೇ ಬಡಾಗಡಿ ನಾಗಬೊಬ್ಬರ್ಯ ಕಾರಣೀಕ ಮೆರೆದಿದೆ ಎಂದು ಗ್ರಾಮಸ್ಥರು ನಂಬಿದ್ದಾರೆ.
