ಕುಂದಾಪುರ: ಸ್ವಾತಂತ್ರ್ಯ ದಿನಾಚರಣೆಗೆ ಭರದಿಂದ ಸಾಗುತ್ತಿದೆ ಸಕಲ ಸಿದ್ಧತೆ

ಕುಂದಾಪುರ: 75ರ ಸುವರ್ಣ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆಗೆ ಕ್ಷಣಗಣನೆ ಆರಂಭಗೊಳ್ಳುತ್ತಿರುವಂತೆಯೇ ಕುಂದಾಪುರದ ಹೃದಯ ಭಾಗ ಶಾಸ್ತ್ರಿ ವೃತ್ತದಲ್ಲಿ ಸ್ವಾತಂತ್ರೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ.

ಬೈಕ್ ಮತ್ತು ಸೈಕಲ್ ಗಳಲ್ಲಿ ರಾಷ್ಟ್ರಧ್ವಜ ಮಾರಾಟ ನಡೆಯುತ್ತಿದ್ದರೆ ಕುಂದಾಪುರದ ಲಾಲ್ ಬಹುದ್ದೂರ್ ಶಾಸ್ತ್ರಿ ಪ್ರತಿಮೆಯ ಸುತ್ತ ಕೇಸರಿ ಬಿಳಿ ಹಸಿರು ಬಣ್ಣದ ಬಲೂನುಗಳಿಂದ ಅಲಂಕರಿಸಲಾಗುತ್ತಿದೆ. ಶಾಸ್ತ್ರಿಜಿಯವರ ಪ್ರತಿಮೆಗೆ ಹೂವಿನ ಹಾರಗಳನ್ನು ಹಾಕಿ ಸಿಂಗರಿಸಲಾಗುತ್ತಿದೆ.
ಕುಂದಾಪುರದ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಶಾಸ್ತ್ರಿ ವೃತ್ತದಲ್ಲಿ ಆಟೋ ಚಾಲಕರು ಮತ್ತು ಕಾರು ಚಾಲಕರ ಸಂಘಟನೆಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಲು ಮತ್ತು ಸ್ವಾತಂತ್ರ್ಯೋತ್ಸವವನ್ನು ಸ್ವಾಗತಿಸಲು ಸಿದ್ಧತೆ ನಡೆಯುತ್ತಿದೆ ಕುಂದಾಪುರ ಪುರಸಭೆ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುತ್ತಿದ್ದು ಕೇವಲ ಫೋಟೋ ಫೋಸ್ ಗಾಗಿ ಕಾಯುತ್ತಿರುವಂತಿದೆ.
https://youtu.be/isS-ZMNjmiE?si=CEoIirBRBJRgK3Fm
