ಗಂಗೊಳ್ಳಿ: ಶಾರದಾ ಮಂಟಪದಲ್ಲಿ ಕೋಟಿ ಸ್ತುತಿ ಪಠಣಕ್ಕೆ ಚಾಲನೆ

ಕುಂದಾಪುರ : ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವ-2024 ಅಂಗವಾಗಿ ವಿದ್ಯಾ, ಬುದ್ಧಿ, ಜ್ಞಾನ, ಸುಖ, ಶಾಂತಿ, ಮತ್ಸ್ಯ ಸಮೃದ್ಧಿ, ಗ್ರಾಮ ಸುಭಿಕ್ಷೆ ಹಾಗೂ ಲೋಕ ಕಲ್ಯಾಣಾರ್ಥ ಶ್ರಾವಣ ಮಾಸದಲ್ಲಿ ಹಮ್ಮಿಕೊಂಡಿರುವ ಒಂದು ಕೋಟಿ ಶ್ರೀ ಶಾರದಾ ದೇವಿಯ ಸ್ತುತಿ ಪಠಣ ಕಾರ್ಯಕ್ರಮಕ್ಕೆ ಸೋಮವಾರ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಚಾಲನೆ ನೀಡಲಾಯಿತು.
ಪುರೋಹಿತರಾದ ಜಿ.ರಾಘವೇಂದ್ರ ಆಚಾರ್ಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಿತಿ ಅಧ್ಯಕ್ಷ ಸತೀಶ ಜಿ., ಮಹಿಳಾ ಸಮಿತಿ ಅಧ್ಯಕ್ಷೆ ಸವಿತಾ ಯು.ದೇವಾಡಿಗ, ಕಾರ್ಯದರ್ಶಿ ಸುಜಾತ ಬಾಬು ಖಾರ್ವಿ, ರವೀಂದ್ರ ಪಟೇಲ್, ಸೌಪರ್ಣಿಕಾ ಬಸವ ಖಾರ್ವಿ, ಶಕುಂತಲಾ ಬಿ.ಖಾರ್ವಿ, ಸುರೇಶ್ ಜಿಎಫ್‌ಸಿಎಸ್, ಸುವರ್ಣ ಮಹೋತ್ಸವ ಸಮಿತಿ ಸದಸ್ಯರು, ಮಹಿಳಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
