ಬೈಂದೂರು: ವಿಶ್ವ ಕುಂದಾಪ್ರ ಕನ್ನಡ – ಸಾಹಿತಿ, ನಟ ಶರತ್ ಶೆಟ್ಟಿ ಬಿಜೂರಿಗೆ ಸನ್ಮಾನ
ಕುಂದಾಪುರ: ವಿಶ್ವ ಕುಂದಾಪ್ರ ಕನ್ನಡದ ಪ್ರಯುಕ್ತ ಬೈಂದೂರಿನ ಸಾಹಿತಿ, ಚಿತ್ರ ನಟ, ಚಲನಚಿತ್ರ ಹಿನ್ನೆಲೆ ಸಂಗೀತ ರಚನೆಕಾರ ಶರತ್ ಶೆಟ್ಟಿ ಬಿಜೂರು ಅವರನ್ನು ಕುಂದ ಕನ್ನಡ ಅಧ್ಯಯನ ಕೇಂದ್ರ ಉಪ್ಪುಂದ, ಗಲ್ಪ್ ವಿಶ್ವ ಕುಂದಾಪ್ರ ಕನ್ನಡ ಬಳಗ ಹಾಗೂ ಕುಂದಾಪ್ರ ಡಾಟ್ ಕಾಂ ನ್ಯೂಸ್ ಪೋರ್ಟಲ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಭಾನುವಾರ ಉಪ್ಪುಂದದ ಶಂಕರ ಕಲಾ ಮಂದಿರದಲ್ಲಿ ನಡೆದ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಸಂದರ್ಭ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಉಪ್ಪುಂದದ ಹಿರಿಯ ಸಾಹಿತಿ ಯು. ಚಂದ್ರಶೇಖರ ಹೋಳ್ಳ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ ಚಂದ್ರ ಶೆಟ್ಟಿ, ಪತ್ರಕರ್ತ ಅರುಣ್ ಕುಮಾರ್ ಶಿರೂರು, ಕುಂದಾಪುರ ಡಾಟ್ ಕಾಮ್ ಸುನಿಲ್ ಬೈಂದೂರು, ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಮಾಜೀ ಟ್ರಸ್ಟೀಗಳಾದ ಜಯಾನಂದ ಹೋಬಳಿದಾರ್ ಮೊದಲಾದವರು ಉಪಸ್ಥಿತರಿದ್ದರು.
