BlogCrime newsHighlightsLocal newsOthersPoliticsState newsTop StoriesTrending

ಗಂಗೊಳ್ಳಿ: ಸಮುದ್ರ ತೀರದಲ್ಲಿ ಗೋವಿನ ಅವಶೇಷ – ಹಿಂದೂ ಸಂಘಟನೆಗಳಿಂದ ಆಕ್ರೋಶ

Aware others:

ಕುಂದಾಪುರ: ಗಂಗೊಳ್ಳಿಯ ಸಮುದ್ರತೀರದಲ್ಲಿ ಗೋಣಿಚೀಲದಲ್ಲಿ ಕಟ್ಟಿ ಎಸೆಯಲಾದ ಗೋವಿನ ಅವಶೇಷಗಳು ಪತ್ತೆಯಾಗಿದ್ದು, ಇಲ್ಲಿನ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಗಂಗೊಳ್ಳಿಯ ಕಡಲ ತೀರದಲ್ಲಿ ಗೋಣಿ ಚೀಲದಲ್ಲಿ ದನದ ಅವಶೇಷಗಳು ತೇಲಿಕೊಂಡು ಬಂದಿದ್ದು, ಚೀಲದಲ್ಲಿ  ದನದ ತಲೆಯ ಭಾಗ ಹಾಗೂ ದವಡೆಯ ಮೂಳೆ ಹಾಗೂ ದನದ ಕಳೆಬರಗಳು ಪತ್ತೆಯಾಗಿದೆ. ಗೋವನ್ನು ವಧೆ ಮಾಡಿ ಅದರ ಕಳೆಬರವನ್ನು ಚೀಲದಲ್ಲಿ ಹಾಕಿ ಸಮುದ್ರಕ್ಕೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಪದೇ ಪದೇ ಗೋವನ್ನು ಕಳ್ಳತನ ಮಡಿ, ಗೋವನ್ನು ವಧೆ ಮಾಡಿ ಅವರ ಕಳೆಬರವನ್ನು ಸಮುದ್ರ ಹಾಗೂ ನದಿಯಲ್ಲಿ ಎಸೆದು ವಿಕೃತಿ ಮೆರೆದು ಹಿಂದುಗಳ ಭಾವನೆಗೆ ನೋವುಂಟು ಮಾಡುತ್ತಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಹಿಂದು ಪರ ಸಂಘಟನೆಗಳು ಆಗ್ರಹಿಸಿವೆ. ಈ ಬಗ್ಗೆ ಮೋಹನ್ ಎಂಬುವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  


Aware others:

Leave a Reply

Your email address will not be published. Required fields are marked *

error: Content is protected !!