BlogCulturalFashionGovernmentHighlightsHuman storiesLifestyleLocal newsNational NewsOthersPoliticsState newsTop StoriesTrending

ಸುಲ್ತಾನ್ಪುರ್: ರಾಹುಲ್ ಗಾಂಧಿ ಹೊಲಿದ ಚಪ್ಪಲಿಗಳಿಗೆ ಲಕ್ಷ ಲಕ್ಷ ಹಣ ಕೊಟ್ಟು ಖರೀದಿಸಲು ಮುಗಿಬಿದ್ದ ಜನ!

Aware others:

ಸುಲ್ತಾನಪುರ: ಕೇಂದ್ರದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸುಲ್ತಾನ್ ಪುರಕ್ಕೆ ಹೋಗಿದ್ದಾಗ ಚಮ್ಮಾರನ ಅಂಗಡಿಯಲ್ಲಿ ಹೊಲಿಗೆ ಹಾಕಿದ್ದ ಚಪ್ಪಲಿಗಳಿಗೆ ಭಾರಿ ಬೇಡಿಕೆ ಬಂದಿದೆ. ಆ ಚಪ್ಪಲಿಗಳನ್ನು ಲಕ್ಷ ಲಕ್ಷ ಹಣವನ್ನು ಕೊಟ್ಟು ಖರೀದಿ ಮಾಡಲು ಜನರು ಮುಗಿಬಿದ್ದಿದ್ದಾರೆ.

ರಾಹುಲ್ ಗಾಂಧಿ ತನ್ನ ಅಂಗಡಿಗೆ ಭೇಟಿ ನೀಡಿದ್ದ ವೇಳೆ ಹೊಲಿದಿದ್ದ ಚಪ್ಪಲಿಗಳನ್ನು 10 ಲಕ್ಷ ರೂ. ಕೊಟ್ಟು ಖರೀದಿಸಲು ಕೆಲವರು ಮುಂದೆ ಬಂದಿದ್ದರೂ, ಅವುಗಳನ್ನು ಮಾರಾಟ ಮಾಡುವುದಕ್ಕೆ ಇಲ್ಲಿನ ಚಮ್ಮಾರ ರಾಮ್ ಚೇತ್ ನಿರಾಕರಿಸಿದ್ದಾರೆ. ರಾಹುಲ್ ಗಾಂಧಿ ಹೊಲಿದಿರುವ ಈ ಚಪ್ಪಲಿಗಳನ್ನು ನನ್ನ ಅದೃಷ್ಟದ ಪಾದರಕ್ಷೆಗಳೆಂದು ಭಾವಿಸಿ, ಅವುಗಳನ್ನು ಗಾಜಿನ ಪೆಟ್ಟಿಗೆಯಲ್ಲಿ  ಪಾನವಾಗಿಡುತ್ತೇನೆ’ಎಂದು ರಾಮ್ ಚೇತ್ ಹೇಳಿದ್ದಾರೆ.

ಚಪ್ಪಲಿ ಅಂಗಡಿಗೆ ರಾಹುಲ್ ಗಾಂಧಿ ಭೇಟಿ ನೀಡಿದ ಬಳಿಕ ಅಂಗಡಿ ಮಾಲೀಕ ರಾಮ್ ಚೇತ್  ಈಗ ತಮ್ಮೂರಿನಲ್ಲಿ ‘ಸೆಲೆಬ್ರಿಟಿ’ ಆಗಿಬಿಟ್ಟಿದ್ದಾರೆ. ಸುಲ್ತಾನಪುರದ ಹೊರವಲಯದ ವಿಧಾಯಕನಗರದಲ್ಲಿ ರಾಮ್ ಚೇತ್ ಪುಟ್ಟ ಅಂಗಡಿ ಇಟ್ಟುಕೊಂಡಿದ್ದಾರೆ. ಜುಲೈ 26ರಂದು ಆ ಮಾರ್ಗವಾಗಿ ತೆರಳುತ್ತಿದ್ದ ವೇಳೆ, ರಾಹುಲ್ ಗಾಂಧಿ ಅವರು ರಾಮ್ ಚೇತ್ ಅಂಗಡಿಗೆ ಭೇಟಿ ನೀಡಿ, ಅವರ ಕುಟುಂಬ ಹಾಗೂ ಕಷ್ಟಗಳ ಕುರಿತು ಮಾತನಾಡಿದ್ದರು. ಅದೇ ವೇಳೆ, ಚಪ್ಪಲಿಯನ್ನು ಹೊಲಿದಿದ್ದ ರಾಹುಲ್ ಗಾಂಧಿ, ಶೂ ಕೂಡ ಸಿದ್ಧಪಡಿಸಿದ್ದರು.

ರಾಹುಲ್ ಗಾಂಧಿ ಅವರು ಭೇಟಿ ನೀಡಿದ ನಂತರ ನನ್ನ ಅದೃಷ್ಟವೇ ಖುಲಾಯಿಸಿದೆ. ಈ ಮೊದಲು ನಾನು ಯಾರು ಎಂಬುದೇ ಜನರಿಗೆ ತಿಳಿದಿರಲಿಲ್ಲ. ಈಗ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ಅಂಗಡಿಗೆ ಬಂದು, ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ’ ಎಂದು ರಾಮ್ ಚೇತ್  ಎಎನ್ಐ ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇನ್ನೊಂದೆಡೆ, ರಾಮ್ ಚೇತ್ ಎದುರಿಸುತ್ತಿರುವ ತೊಂದರೆಗಳ ಕುರಿತು ಮಾಹಿತಿ ಪಡೆಯುವುದಕ್ಕಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಅವರನ್ನು ಭೇಟಿ ಮಾಡುತ್ತಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!