ಬೀಜಾಡಿ: ಕಡಲತೀರದಲ್ಲಿ ಅವರಿಚಿತ ನಗ್ನ ಶವ ಪತ್ತೆ!?

ಕುಂದಾಪುರ: ಅರಬ್ಬೀ ಸಮುದ್ರದ ಬೀಜಾಡಿ ಕಡಲ ತೀರದಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದೆ. ವಿಶೇಷವೆಂದರೆ ಪತ್ತೆಯಾದ ಶವ ಮೇಲ್ನೋಟಜ್ಕೆ ಸಮುದ್ರದಲ್ಲಿ ತೇಲಿ ಬಂದಿದ್ದು, ಕಡಲ ಅಲೆಗಳು ಮೃತದೇಹವನ್ನು ತೀರಕ್ಕೆ ಎಸೆದಿದೆ. ಕಡಲ ತೀರದಲ್ಲಿ ಪತ್ತೆಯಾದ ವ್ಯಕ್ತಿಯು ಸುಮಾರು ಮೂವತ್ತೈದರಿಂದ ನಲವತ್ತು ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇಮೃತದೇಹದ ಮೇಲೆ ಯಾವುದೇ ಬಟ್ಟೆ ಇಲ್ಲದೇ ಸಂಪೂರ್ಣ ನಗ್ನವಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಪತ್ತೆಯಾದ ಮೃತದೇಹ ಯಾರದ್ದು ಎಂದು ಪತ್ತೆಯಾಗಿಲ್ಲ. ವ್ಯಕ್ತಿಯ ಸಾವಿಗೆ ಕಾರಣವೂ ತಿಳಿದುಬಂದಿಲ್ಲ. ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದು, ಅಪರಿಚಿತ ಶವದ ಗುರುತು ಸಿಕ್ಕಿದಲ್ಲಿ ತಕ್ಷಣ ಕುಂದಾಪುರ ಪೊಲೀಸರನ್ನು ಸಂಪರ್ಕಿಸಬಹುದು
