BlogCulturalHighlightsHuman storiesLifestyleLocal newsOthersState newsTop StoriesTrending

ತಲ್ಲೂರು: ಸಂತ ಪ್ರಾನ್ಸಿಸ್ ಅಸ್ಸಿಸ್ಸಿ ಇಗರ್ಜಿಯಲ್ಲಿ ಹಿರಿಯರ ದಿನಾಚರಣೆ

Aware others:

ಕುಂದಾಪುರ: ಇಲ್ಲಿಗೆ ಸಮೀಪದ ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ  ಇಗರ್ಜಿಯಲ್ಲಿ  ಕುಟುಂಬ ಆಯೋಗದ ಸಹಕಾರದಲ್ಲಿ ಹಿರಿಯರ ದಿನವನ್ನು ಯಿಂದ ಆಚರಿಸಲಾಯಿತು. ಬೆಳಿಗ್ಗೆ 10.15 ಕ್ಕೆ ದಿವ್ಯ ಬಲಿಪೂಜೆಯನ್ನು ಪ್ರಧಾನ ಗುರುಗಳಾಗಿ ಹಾಜರಿದ್ದ ಫ್ರಾನ್ಸಿಸ್ ಕಾರ್ನೆಲಿಯೋ ನೆರವೇರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಿಕ್ಷಕಿ ಹಿಲ್ಡ ಡಿಸಿಲ್ವ ಅವರು, ವೃದ್ಧಾಪ್ಯದಲ್ಲಿ ಹಿರಿಯರು, ಮಕ್ಕಳು, ಮೊಮ್ಮಕ್ಕಳ ಜೊತೆ ಹೇಗೆ ಸುಖಕರ ಜೀವನ ನಡೆಸಬಹುದು ಎಂದು ತಿಳಿಸಿದರು. 60ರಿಂದ 75 ವರ್ಷ ಪೂರೈಸಿದ ಹಿರಿಯರನ್ನು ಹಾಗೂ ಮದುವೆಯಾಗಿ 50 ವರ್ಷ ಪೂರೈಸಿದ ಹಿರಿಯ ದಂಪತಿಗಳಿಗೆ ಇಗರ್ಜಿಯ ಧರ್ಮ ಗುರು ಎಡ್ವಿನ್ ಡಿಸೋಜಾ ಶಾಲು ಹೊದೆಸಿ ಸನ್ಮಾನಿಸಿದರು. ಇದೇ ಸಂದರ್ಭ ಹಿರಿಯರಿಗಾಗಿ  ಲಕ್ಕಿ ಗೇಮ್ ನಡೆಸಿ ಗೆದ್ದವರಿಗೆ ಬಹುಮಾನವನ್ನು ವಿತರಿಸಿ ಗೌರವಿಸಿದರು . ICYM ಸದಸ್ಯರು ಮನರಂಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. YCS ವಿದ್ಯಾರ್ಥಿಗಳು ಹಿರಿಯರನ್ನು ಉಪಚರಿಸಿದರು. ಸುಮಾರು 106 ಮಂದಿ ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈಗರ್ಜಿಯ ಪಾಲನಾ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಆಯೋಗದ ಸಂಚಾಲಕರು ಹಾಜರಿದ್ದರು. ಕುಟುಂಬ ಆಯೋಗದ ಸಂಚಾಲಕ ರಾಜೇಶ್ ಮೆಂಡೋನ್ಸಾರವರ ನೇತೃತ್ವದಲ್ಲಿ ನಡೆಯಿತು.  ಆಯೋಗದ ಸದಸ್ಯ ಅನಿಲ್ ಡಿಸಿಲ್ವರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಸಹ ಭೋಜನ ಕಾರ್ಯಕ್ರಮ ನಡೆಯಿತು.


Aware others:

Leave a Reply

Your email address will not be published. Required fields are marked *

error: Content is protected !!