BlogAccidentGovernmentHighlightsLocal newsNatureOthersState newsTrendingWomen Care

ಕುಂದಾಪುರ: ಮನೆಮೇಲೆ ಬಿದ್ದ ಮರ – ಮೂವರಿಗೆ ಗಾಯ, ಮನೆ‌ ಜಖಂ

Aware others:

ಕುಂದಾಪುರ: ನಗರದ ಖಾರ್ವಿಕೇರಿಯ ಕೆಳಕೇರಿ ಬಸವ ಖಾರ್ವಿ ಎಂಬುವರ ಮನೆಯ ಮೇಲೆ ತೆಂಗಿನ ಮರ ಬಿದ್ದ ಪರಿಣಾಮ‌ಮನೆ ಸಂಪೂರ್ಣ ಹಾನಿಗೀಡಾಗಿದ್ದಲ್ಲದೇ ಮನೆಯೊಳಗಿದ್ದ ಮೂವರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಬುಧವಾರ ನಡೆದಿದೆ.

ವಿಪರೀತ ಗಾಳಿ ಮಳೆಯಿಂದಾಗಿ ಕುಸಿದ ಮರ ಮನೆಯ ಮೇಲೆ‌ ಬಿದ್ದಿದೆ. ಆ ಸಂದರ್ಭ ಅಲ್ಲಿಯೇ ಇದ್ದ ಬಸವ ಖಾರ್ವಿ, ಮಾಲತಿ, ಗೌರಿ ಎಂಬುವರಿಗೆ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ತಹಸೀಲ್ದಾರ್ ಶೋಭಾ ಲಕ್ಷ್ಮಿ, ಸಹಾಯಕ ಆಯುಕ್ತೆ ಎಸ್.ಆರ್.ರಶ್ಮಿನಿರೀಕ್ಷಕ ನಂದಕುಮಾರ್ ಭೇಟಿ ನೀಡಿ‌ ಪರಿಶೀಲನೆ‌ ನಡೆಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!