AccidentBlogEconomyGovernmentHighlightsLifestyleLocal newsNatureOthersState newsTop StoriesTrending

ಹಾಲಾಡಿ: ಪುನರ್ವಸು ಮಳೆಗೆ ಕೊಚ್ಚಿ ಹೋದ ಸೇತುವೆ – ಜಿಲ್ಲಾಧಿಕಾರಿ ಭೇಟಿ

Aware others:

ಕುಂದಾಪುರ: ಜುಲೈ ಆರರಿಂದ ಆರಂಭಗೊಂಡ ಪುನರ್ವಸು ಮಳೆ ಕರಾವಳಿಯಲ್ಲಿ ವ್ಯಾಪಕವಾಗಿ ಸುರಿಯುತ್ತಿದ್ದು, ಎರಡು ದಿನಗಳಿಂದ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸುತ್ತಿದೆ.

ಕುಂದಾಪುರ ತಾಲೂಕಿನ ಹಾಲಾಡಿ ಸಮೀಪದ ಚೋರಾಡಿಯಲ್ಲಿ ರಡು ವರ್ಷಗಳ ಹಿಂದೆ ನಿರ್ಮಾಣಗೊಂಡ ಸೇತುವೆಯ ಸಂಪರ್ಕಕ್ಕೆ ಹಾಕಲಾಗಿದ್ದ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿದ್ದು, ಹಾಲಾಡಿ – ಮುದೂರು ಜನಸಂಪರ್ಕ ಕಡಿದುಹೋಗಿದೆ.

ಹಾಲಾಡಿಯ ಟಿವಿ‌ಎಸ್ ಶೋರೂಂ ಹತ್ತಿರದಿಂದ ಮುದೂರಿಗೆ ಹೋಗುವ ಮಾರ್ಗದ ಸೇತುವೆ ಇದಾಗಿದ್ದು ಈ ಭಾಗಕ್ಕೆ ಸಂಪರ್ಕ ಬೆಸೆಯುವ ಪ್ರಮುಖ ಸೇತುವೆಯಾಗಿದೆ. ನೀರಿನ ರಭಸಕ್ಕೆ ಸೇತುವೆಯ ಎರಡೂ ಬದಿಗಳಿಗೆ ಹಾಕಲಾಗಿದ್ದ ಮಣ್ಣು ಸಂಪೂರ್ಣ ಕುಸಿದು ನೀರುಪಾಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!