ನಾವುಂದ: ನೆರೆ ಪ್ರದೇಶದಲ್ಲಿ ಸಮೃದ್ದ ಬೈಂದೂರು ತಂಡದಿಂದ ಆಹಾರಕಿಟ್ ವಿತರಣೆ
ಕುಂದಾಪುರ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ನಾವುಂದದ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಸಂತ್ರಸ್ಥ ಕುಟುಂಬಗಳಿಗೆ ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಸದಸ್ಯರು ಸ್ಪಂದಿಸಿದ್ದಾರೆ.




ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ ಮೇರೆಗೆ ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಬಿ. ಎಸ್ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಸಮೃದ್ಧ ಬೈಂದೂರು ತಂಡ ನಾವುಂದದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರ ರಕ್ಷಣೆ ನೀಡುತ್ತಿರುವ ನೂರಕ್ಕೂ ಅಧಿಕ ಸ್ಥಳೀಯ ಸ್ವಯಂಸೇವಕರಿಗೆ ಊಟದ ವ್ಯವಸ್ಥೆ ಮಾಡಿತು. ಸಮೃದ್ಧ ಬೈಂದೂರು ತಂಡದ ಗಣೇಶ್ ಗಾಣಿಗ, ಪ್ರವೀಣ್ ಸೋಮಯ್ಯ, ಜೆ.ಪಿ.ಬಡಾಕೆರೆ ಸೇರಿದಂತೆ ಟ್ರಸ್ಟ್ ಸದಸ್ಯರ ಸೇವೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
