BlogCulturalEntertainmentHighlightsHuman storiesLifestyleLocal newsOthersState newsTrendingWomen Care

ಕೋಟ: ಆಸಾಡಿ ಒಡ್ರ್ ಸಾಧಕ ಪುರಸ್ಕಾರಕ್ಕೆ ಬಹುಮುಖ ಪ್ರತಿಭೆ ಸುಜಾತ.ಎಂ.ಬಾಯರಿ ಆಯ್ಕೆ

Aware others:

ಕೋಟ: ಇಲ್ಲಿನ ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಸಂಯೋಜನೆಯೊಂದಿಗೆ ನಡೆಯಲಿರುವ ಮೂರನೇ ವರ್ಷದ ಆಸಾಡಿ ಒಡ್ರ್ ಸಾಧಕ ಪುರಸ್ಕಾರಕ್ಕೆ ಕುಂದಗನ್ನಡ ಬಹುಮುಖ ಪ್ರತಿಭೆ ಸುಜಾತ.ಎಂ.ಬಾಯರಿ ಆಯ್ಕೆಯಾಗಿದ್ದಾರೆ.

ಇದೇ ಬರುವ ಅಗಸ್ಟ್ 11 ರಂದು ಭಾನುವಾರ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ನಡೆಯಲಿರುವ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಹಮ್ಮಿಕೊಳ್ಳಲಿರುವ ಆಸಾಡಿ ಒಡ್ರ್ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.

ವಿಶೇಷ ಅಭಿನಂದನೆಯ ಭಾಗವಾಗಿ ಪಂಚವರ್ಣ ಮಹಿಳಾ ಮಂಡದ ಸ್ಥಾಪಾಕಾಧ್ಯಕ್ಷೆ ಕಲಾವತಿ ಅಶೋಕ್ ಗೌರವಿಸಲಿದ್ದು.ಇದೇ ವೇಳೆ ಕುಂದಗನ್ನಡದ ರಾಯಭಾರಿ ಚಿತ್ರನಟ ರಘು ಪಾಂಡೇಶ್ವರ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು, ಗ್ರಾಮೀಣ ತಿನಿಸುಗಳು, ಪರಿಕರ ಅನಾವರಣ, ಸ್ನೇಹಕೂಟ ಮಣೂರು ಹಾಗೂ ಮಹಿಳಾ ವೇದಿಕೆ ಸಾಲಿಗ್ರಾಮ ಇವರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್  ಸಹಕಾರ ನೀಡಲಿದೆ ಎಂದು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ತಿಳಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!