ದಾಖಲೆ ನೀಡಲು ಲಂಚ: ಉಪ್ಪೂರು ಪಿಡಿಒ, ಬಿಲ್‌ಕಲೆಕ್ಟರ್ ಲೋಕಾಯುಕ್ತ ಬಲೆಗೆ!

ವಾಸ್ತವ.ಕಾಂ
ಕುಂದಾಪುರ: ಭೂಮಿಯ ದಾಖಲೆ ನೀಡಲು ಲಂಚ ಸ್ವೀಕರಿಸುತ್ತಿದ್ದ ಉಪ್ಪೂರು ಗ್ರಾಮ ಪಂಚಾಯತ್ ಪಿಡಿಒ ಇನಾಯತ್ ಉಲ್ಲಾ ಬೇಗ್ ಹಾಗೂ ಬಿಲ್ ಕಲೆಕ್ಟರ್ ಸಂಜಯ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ರವಿ ಡಿಲಿಮಾ ಅವರಿಂದ 9 ಮತ್ತು 11 ನೀಡಲು 13,300 ರೂ. ಪಡೆಯುತ್ತಿದ್ದಾಗ ಕಾರ್ಯಾಚರಣೆ ನಡೆಸಲಾಗಿತ್ತು. ಲೋಕಾಯುಕ್ತ ಎಸ್.ಪಿ. ನಟರಾಜ್ ಮಾರ್ಗದರ್ಶನದಲ್ಲಿ ಡಿ. ವೈ. ಎಸ್. ಪಿ ಕೆ. ಸಿ ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಮಂಜುನಾಥ್ ಹಾಗೂ ರಫೀಕ್ ಮತ್ತು ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ಪುಷ್ಪವತಿ, ರೋಹಿತ್, ಸತೀಶ್ ಹಂದಾಡಿ, ಮಲ್ಲಿಕಾ ಪ್ರಸನ್ನ ದೇವಾಡಿಗ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ರಮೇಶ್, ಸೂರಜ್, ಸತೀಶ್ ಆಚಾರ್ಯ,ಸುಧೀರ್, ರಾಘವೇಂದ್ರ ಹೊಸಕೋಟೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
