BlogCrime newsHighlightsLocal newsNatureOthersState newsTrending

ಅಬ್ಬರದ ಮಳೆಗೆ ಕುಸಿದು ಬಿದ್ದ ಅನ್ನಛತ್ರದ ಛಾವಣಿ, ರಸ್ತೆಗುರುಳಿದ ಮರಗಳು

Aware others:

ಅಬ್ಬರದ ಮಳೆಗಾಳಿಗೆ ತತ್ತರಿಸಿದ ಜನ

ಕೊಲ್ಲೂರು ರಸ್ತೆಗುರುಳಿದ ಮರ ತೆರವುಗೊಳಿಸುತ್ತಿರುವ ಸ್ಥಳೀಯರು

ಕುಂದಾಪುರ: ನಿರೀಕ್ಷೆಗೂ ಮುನ್ನ ಕರಾವಳಿಯಲ್ಲಿ ಮಳೆ ಆರಂಭಗೊಂಡಿದೆ. ಮಳೆಯ ಜೊತೆಗೆ ಸಿಡಿಲು ಹಾಗೀ ತೀವ್ರ ಗಾಳಿಯೂ ಸಾಥ್ ನೀಡುತ್ತಿದೆ. 

ಗುರುವಾರ ಸುರಿದ ಭಾರೀ ಮಳೆ ಗಾಳಿಗೆ ಮರಗಳು, ದೇವಸ್ಥಾನದ ಅನ್ಛತ್ರದ ಮೇಲ್ಛಾವಣಿಗಳು ಕುಸಿದು ಬಿದ್ದಿವೆ. ಬೈಂದೂರು ತಾಲೂಕಿನ ಕಳವಾಡಿ ಈಶ್ವರ ಮಾರಿಕಾಂಬಾ ದೇವಳದ ಅನ್ನಛತ್ರ ಸಂಪೂರ್ಣ ಕುಸಿದು ಧರೆಗುರುಳಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಧರೆಗುರುಳಿದ ಈಶ್ವರ ಮಾರಿಕಾಂಬಾ ದೇವಳದ ಅನ್ನಛತ್ರ

ಇನ್ನು ಕೊಲ್ಲೂರು ರಸ್ತೆಯಲ್ಲಿ ಮರ ಉರುಳಿ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳೀಯರ ಸಹಕಾರದೊಂದಿಗೆ ರಸ್ತೆಯಲ್ಲಿ ಬಿದ್ದ ಮರವನ್ನು ತೆರವಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಪರಿಣಾಮ ತಡರಾತ್ರಿಯವರಗೂ ವಿದ್ಯುತ್ ವ್ಯತ್ಯಯವುಂಟಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ 👇


Aware others:

Leave a Reply

Your email address will not be published. Required fields are marked *

error: Content is protected !!