BlogHighlightsLocal newsNational NewsPoliticsState newsTrending

ಬಿಜೆಪಿಗೆ ಸೋಲಿನ ಭೀತಿ, ಹತಾಶೆ ಎದುರಾಗಿದೆ – ಹಳೆಯ ವಿಡಿಯೋ ಬಳಸಿದ್ದಕ್ಕೆ ಈಶ್ವರಪ್ಪ ಆಕ್ರೋಶ

Aware others:

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಿನ ಹತಾಶೆ ಭೀತಿ ಎದುರಾಗಿದೆ. ಅದೇ ಕಾರಣಕ್ಕೆ ಹಿಂದಿನ ಲೋಕಸಭಾ ಚುನಾವಣೆಯ ಸಂದರ್ಭದ ವಿಡಿಯೋವೊಂದನ್ನು ಬಳಸಿ ಅಪಪ್ರಚಾರ ಮಾಡುವ ನೀಚ ಕೃತ್ಯಕ್ಕೆ ಬಿಜೆಪಿ ಕೈ ಹಾಕಿದೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ.

ಮಂಗಳವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಷ್ಡ್ರೀಯ ಪಕ್ಷವೊಂದು ಇಂತಹಾ ನೀಚ ಕೆಲಸ ಮಾಡುವ ಮಟ್ಟಕ್ಕೆ ಇಳಿದಿರುವುದು ನಿಜಕ್ಕೂ ದುರಂತಕರ ಸಂಗತಿ. ಬಹುಃಷ ರಾಜಕೀಯವನ್ನು ಹೊಲಸುಗೆಡಿಸುವಂತಹ ಕೃತ್ಯ ರಾಜ್ಯದಲ್ಲಿ ಇದೇ ಮೊದಲು ಎಂದಬಾವರು ನಾನು ಯಾವುದೇ ಕಾರಣಕ್ಕೂ ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವುದಿಲ್ಲ. ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಎಂಟನೇ ಸಂಖ್ಯೆಯಲ್ಲಿರುವ ನನ್ನ ಚಿಹ್ನೆ ಕಬ್ಬು ಹಿಡಿದ ರೈತ ಎಂದು ಸ್ಪಷ್ಟಪಡಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!