BlogCulturalEducationEntertainmentHighlightsLocal newsOthersPolitics

ಕುಂದಾಪುರ: ಕುಣಿಯೋಣು ಬಾ ಮಕ್ಕಳ ಶಿಬಿರ ಉದ್ಘಾಟನೆ

Aware others:

ಕುಂದಾಪುರ: ಮಕ್ಕಳ ಶಾಲಾ ರಜೆಯನ್ನು ಮನೆಯಲ್ಲಿ ಮೊಬೈಲ್ ನಿಂದ ಹೊರ ತಂದು ಮನಸ್ಸಿಗೆ ಆಹ್ಲಾದ, ಬಾಲ್ಯದ ಸಹಜ ಸಂತಸ ನೀಡುವ ಸೃಜನಶೀಲ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅವರ ಪೋಷಕರು  ಪ್ರೋತ್ಸಾಹಿಸಬೇಕು ಎಂದು ಕುಂದಾಪುರ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷರಾದ ಡಾ.ಸದಾನಂದ ಬೈಂದೂರು ಹೇಳಿದರು.

ಅಕ್ಷರ ಸಾಂಸ್ಕೃತಿಕ ಸಂಸ್ಥೆ ಕುಂದಾಪುರ ಇವರು ಈಸ್ಟ್ ವೆಸ್ಟ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಆರಂಭಿಸಿದ “ಕುಣಿಯೋಣು ಬಾ” ಸೀಸನ್ 2 ಮಕ್ಕಳ ಬೇಸಿಗೆ  ಶಿಬಿರವನ್ನು ತಮಟೆ ಬಡಿದು ಉದ್ಘಾಟಿಸಿ ಮಾತನಾಡಿದರು.

ಮಕ್ಕಳನ್ನು ಈ ನೆಲದ ಸಹಜ ಸಂಭಂಧಿಗಳನ್ನಾಗಿ ಮಾಡುತ್ತಾ, ನಟನೆ, ಅಭಿನಯ, ನಾಟಕ ಹಾಗೂ  ದೇಸಿಯ ಕಲೆಯನ್ನು ಪರಿಚಯಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಉಚಿತವಾಗಿ ಶಿಬಿರ ಮಾಡುತ್ತಿರುವುದು ಶ್ಲಾಘನೀಯ ಎಂದು ಶಿಬಿರದ ನಿರ್ದೇಶಕ ವಾಸುದೇವ ಗಂಗೇರ್ ಹೇಳಿದರು.

ಶಿಬಿರದ ಸಂಯೋಜಕ ಸುರೇಶ್ ಕಲ್ಲಾಗರ ಅಧ್ಯಕ್ಷತೆ ವಹಿಸಿ ವಾಸ್ತವಿಸಿದರು. ವೇದಿಕೆಯಲ್ಲಿ ಶಿಬಿರದ ಸಹ ನಿರ್ದೆಶಕಿ ಚಿನ್ನ ವಿ ಗಂಗೇರ್, ಸಮುದಾಯ ಸಾಂಸ್ಕೃತಿಕ ಸಂಘಟನೆ ಕೋಶಾಧಿಕಾರಿ ಬಾಲಕೃಷ್ಣ ಕೆ ಎಂ, ಸಮುದಾಯದ ಹಿರಿಯರಾದ ಉತ್ಕಲ ಕೆ ಉಪಸ್ಥಿತರಿದ್ದರು. ಸಾವಿತ್ರಿ, ಸೃಷ್ಟಿ ಹಾಗೂ ದಕ್ಷ ಸಹಕರಿಸಿದರು. ಶಿಬಿರದ ಕಾರ್ಯದರ್ಶಿ ರವಿ ವಿ ಎಂ ಅವರು ಸ್ವಾಗತಿಸಿ, ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!