ಬೈಂದೂರು ರೋಡ್ ಶೋಗೆ ಆಗಮಿಸಿದ ಯಡಿಯೂರಪ್ಪ, ಅಣ್ಣಾ ಮಲೈ

ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಬೈಂದೂರಿನಿಂದಲೇ ಒಂದು ಲಕ್ಷಕ್ಕೂ ಆಧಿಕ ಲೀಡ್ ಪತಿಕಲ್ಪನೆಯಲ್ಲಿ ಚುನಾವಣಾ ರಣತಂತ್ರ ಜೋರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮಾಜೀ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಇಂದು ಅರೆಶಿರೂರು ಹ್ಯಾಲಿಪ್ಯಾಡಿಗೆ ಬಂದಿಳಿದರು.
ಈ ಸಂದರ್ಬವ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬ್ರಿಜೇಶ್ ಚೌಟ, ಬಿ.ಎಸ್.ಸುರೇಶ್ ಶೆಟ್ಟಿ, ವೆಂಕಟೇಶ್ ಕಿಣಿ, ಜಯಾನಂದ ಹೋಬಳಿದಾರ್ ಮೊದಲಾದವರು ಸ್ವಾಗತಿಸಿಕೊಂಡರು.
ಬಳಿಕ ಕೊಲ್ಲೂರಿಗೆ ತೆರಳಿ ಮೂಕಾಂಬಿಕೆ ದರ್ಶನ ಪಡೆದು ಬೈಂದೂರು ರೋಡ್ ಶೋದಲ್ಲಿ ಭಾಗವಹಿಸಿದರು.
