BlogHighlightsLocal newsNational NewsOthersPoliticsState newsTrending

ಬೈಂದೂರಿನಲ್ಲಿ ಚುನಾವಣೆಯ ದಿನ ನವದುರ್ಗೆಯರ ಮತ ಅಭಿಯಾನ : ಶಾಸಕ ಗುರುರಾಜ್ ಗಂಟಿಹೊಳೆ

Aware others:

ಬೈಂದೂರು: ಈ ಬಾರಿಯ ಲೋಕಸಭಾ ಚುನಾವಣೆಯ ದಿನದಂದು ನವದುರ್ಗೆಯರ ಮತ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ  ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ  7ರಂದು  ಬೈಂದೂರು ವಿಧಾನಸಭಾ ಕ್ಷೇತ್ರದ ಎಲ್ಲಾ 246 ಬೂತ್ ಗಳಲ್ಲಿ  9 ಮಹಿಳೆಯರು ಮೊದಲ ಮತದಾನ ಮಾಡುವ ಮೂಲಕ ನವದುರ್ಗೆಯರ ಮತ ಅಭಿಯಾನ ನಡೆಯಲಿದೆ ಎಂದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಹೊಸ ಕನಸು ಮತ್ತು ಕಲ್ಪನೆಯೊಂದಿಗೆ ಎದುರಿಸುತ್ತಿದ್ದೇವೆ. ಕಳೆದ ಬಾರಿಯ ಚುನಾವಣೆಯಲ್ಲಿ 75,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೆವು. ಈ ಬಾರಿಯ ಚುನಾವಣೆಯಲ್ಲಿ ಕನಿಷ್ಠ ಒಂದು ಲಕ್ಷ ಹೆಚ್ಚುವರಿ ಮತಗಳನ್ನು ನೀಡುವ ಗುರಿಯನ್ನು ಹೊಂದಿದ್ದೇವೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ. 

ಚುನಾವಣೆಯ ಬಳಿಕ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕೊಲ್ಲೂರಿಗೆ ಕರೆಸುವ ಬಗ್ಗೆ ಒಪ್ಪಿಗೆ ಪಡೆದಿದ್ದು ಈ ಹಿನ್ನೆಲೆಯಲ್ಲಿ ಪ್ರತಿ ಮತದಾರರಿಗೂ ಮೋದಿ ಬರುವಿಕೆಯ ಖಚಿತತೆಯನ್ನು ಮನದಟ್ಟು ಮಾಡಿದ್ದೇವೆ ಎಂದವರು ಹೇಳಿದರು.

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ :


Aware others:

Leave a Reply

Your email address will not be published. Required fields are marked *

error: Content is protected !!