BlogHighlightsLocal newsNational NewsOthersPoliticsState newsTop StoriesTrending

ಉಡುಪಿ ಚಿಕ್ಕಮಗಳೂರಿಗೆ ನಾಳೆ ಮತದಾನ : ಮಸ್ಟರಿಂಗ್ ಪ್ರಕ್ರಿಯೆ ಇಂದು ಪೂರ್ಣ

Aware others:

ಕುಂದಾಪುರ: ಬಹುನಿರೀಕ್ಷಿತ ಲೋಕಸಭೆಗೆ ಎರಡನೇ ಹಂತದ ಚುನಾವಣೆ ಸಂಬಂಧಿಸಿ ಬಹಿರಂಗ ಪ್ರಚಾರ ಬುಧವಾರ ಸಂಜೆ ತೆರೆ ಕಂಡಿದ್ದು, ನಾಳೆ ಉಡುಪಿ ಚಿಕ್ಕಮಗಳುರು ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದ್ದು ಮತದಾನದ ಪೂರ್ವ ತಯಾರಿ ಪ್ರಕ್ರಿಯೆಗಳು ಇಂದು (ಗುರುವಾರ) ಪೂರ್ಣಗೊಂಡಿವೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿಯೂ ನಾಳೆ ಮತದಾನ ನಡೆಯಲಿದ್ದು, ಪೂರ್ವ ತಯಾರಿಗಳ ಜೊತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎಲ್ಲಾ 08 ವಿಧಾನಸಭಾ ಕ್ಷೇತ್ರದ ಒಟ್ಟು 1842 ಮತಗಟ್ಟೆಗಳಲ್ಲಿ ನಾಳೆ ಏಪ್ರಿಲ್ 26ರಂದು ಬೆಳಿಗ್ಗೆ 7.00 ರಿಂದ ಸಾಯಂಕಾಲ 6.00 ಗಂಟೆಯವರೆಗೆ ಮತದಾನ ನಡೆಯಲಿದೆ. ಪ್ರಸ್ತುತ ಚುನಾವಣಾ ಕಣದಲ್ಲಿ ನೋಟಾ ಹೊರತುಪಡಿಸಿ ಒಟ್ಟು 10 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಧಿದಂತೆ ಕುಂದಾಪುರ ಭಂಡಾರ್ಕಾಸ್ ಕಾಲೇಜಿನಲ್ಲಿ ಗುರುವಾರ ಮಸ್ಟರಿಂಗ್ ಪ್ರಕ್ರಿಯೆ ನಡೆಯಿತು. ಕುಂದಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ 222 ಮತದಾನ ಕೇಂದ್ರಗಳಿದ್ದು, ಒಟ್ಟು 63 ರೂಟ್ ಗಳಿವೆ, ಈ ಪೈಕಿ 26 ದೊಡ್ಡ ಬಸ್, 8 ಸಾಮಾನ್ಯ ಬಸ್, 7 ಮಿನಿ ಬಸ್, 7 ವ್ಯಾನ್, 15 ಮ್ಯಾಕ್ಷಿಕ್ಯಾಬ್, 6 ಜೀಪ್, 69 ಮೀಸಲು ವಾಹನ, 3 ಕಂಟೈನರ್ ಗಳು ಚುನಾವಣಾ ಕಾರ್ಯಕ್ಕೆ ತೆರಳಿವೆ. ಈ ಬಾರಿ ಅತೀ ಹೆಚ್ಚು ಶಾಲಾ ವಚಾಹನಗಳನ್ನೇ ಬಳಸಿಕೊಂಡಿರುವುದು ವಿಶೇಷ.

ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪುರುಷ ಮತದಾರರು 100636, ಮಹಿಳಾ ಮತದಾರರು 108690, ಇತರ ಮತದಾರರು 2 ಒಟ್ಟು 211838 ಮತದಾರರಿದ್ದು, 222 ಮತಗಟ್ಟೆಗಳಿವೆ. ಈ ಪೈಕಿ 5 ಸಖಿ ಮತಗಟ್ಟೆಗಳಿದ್ದು, ಬಿ.ಆರ್ ರಾವ್ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ ಉತ್ತರ ಭಾಗ,  ಸರ್ಕಾರಿ ಜೂನಿಯರ್ ಕಾಲೇಜು ತೆಕ್ಕಟ್ಟೆ, ಸ.ಪ.ಪೂ ಕಾಲೇಜು ಬಿದ್ಕಲ್ಕಟ್ಟೆ,  ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ಮಿ ದಕ್ಷಿಣ ಭಾಗ, ಪಾಂಡೇಶ್ವರ. ನ್ಯಾಷನಲ್ ಜೂನಿಯರ್ ಕಾಲೇಜು  ಬಾರಕೂರು ಇದರ ಪೂರ್ವ ಭಾಗ ವಿಶೇಷಚೇತನರ ನಿರ್ವಹಣೆಯ ಮತಗಟ್ಟೆ, ಸೀತಾಲಕ್ಷ್ಮೀ ಮತ್ತು ರಾಮಕೃಷ್ಣ ಹತ್ವಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ ಉತ್ತರ ಭಾಗ ಯುವಜನ ನಿರ್ವಹಣೆಯ ಮತಗಟ್ಟೆ,  ಗ್ರಾಮ ಪಂಚಾಯತ್ ಕಛೇರಿ ಕೋಟ ಗ್ರಂಥಾಲಯ ಕಟ್ಟಡ ಧ್ಯೇಯ ಆಧಾರಿತ ಮತಗಟ್ಟೆ, ಹಾಗೂ ಕುಂದಾಪುರ ಸೆಂಟ್ ಮೇರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯನ್ನು ಸಾಂಪ್ರಾದಾಯಿಕ ಮತಗಟ್ಟೆಗಳನ್ನಾಗಿ ರೂಪಿಸಲಾಗಿದೆ. 

ಪ್ರತಿ ಮತಗಟ್ಟೆಯಲ್ಲಿ ಕುಡಿಯುವ ನೀರು, ಆಸನ ವ್ಯವಸ್ಥೆ ಮತ್ತು ಅಂಗವಿಕಲರಿಗೆ ಗಾಲಿಕುರ್ಚಿ ಸೌಲಭ್ಯ ಮಾಡಲಾಗಿದೆ. ನಿಶ್ಯಕ್ತ, ವಯೋವೃದ್ಧ, ವಿಶೇಷಚೇತನ ಮತದಾರರು ಮತದಾನ ದಿನಕ್ಕೆ ಮುಂಚಿತವಾಗಿ ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ಗ್ರಾಮ ಸಂಪನ್ಮೂಲ ವ್ಯಕ್ತಿಯಲ್ಲಿ ಕೋರಿಕೆ ಸಲ್ಲಿಸಿದಲ್ಲಿ ಮನೆಯಿಂದ ಮತಗಟ್ಟೆಗೆ ಹೋಗಲು ಮತ್ತು ವಾಪಾಸ್ಸು ಬರಲು ವಾಹನದ ವ್ಯವಸ್ಥೆ ಸಹ ಮಾಡಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!