ಸಿಗಡಿ ಹೆಕ್ಕಲು ಹೋದ ಮಹಿಳೆ ನೀರಿನಲ್ಲಿ ಮುಳುಗಿ ಸಾವು
ಕುಂದಾಪುರ: ಹೊಳೆಯಲ್ಲಿ ಸಿಗಡಿ ಹೆಕ್ಕಲು ಹೋಗಿದ್ದ ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ನಿವಾಸಿ ವನಜ ಎಂಬ ಮಹಿಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ವನಜ ಅವರು ಸಿಗಡಿ ಮೀನು ತೆಗೆಯುವ ಕೆಲಸವನ್ನು ಮಾಡಿಕೊಂಡಿದ್ದು, ಎಂದಿನಂತೆ ಅವರು ಸಿಗಡಿ ಮೀನು ಹೆಕ್ಕಲು ಕೋಣಿಯ ಮಲ್ಲನಬೆಟ್ಟು ಹೊಳೆಗೆ ಹೋಗಿದ್ದಾರೆ. ಈ ವೇಳೆ ಅವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಬಳಿಕ ವನಜಾ ಅವರ ಪತಿ ವಾಸು ಹಾಗೂ ಸ್ಥಳೀಯರು ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅದಾಗಲೇ ವನಜಾ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.