BlogCulturalEconomyEntertainmentFashionHighlightsHuman storiesLifestyleLocal newsOthersReligionTop StoriesTrending

ಕುಂದಾಪುರ: ರೋಜರಿ ಮಾತಾ ದೇವಾಲಯದಲ್ಲಿ ಸಂಭ್ರಮದ ಮೋಂತಿ ಹಬ್ಬ ಸಂಪನ್ನ

Aware others:

ಕುಂದಾಪುರ: ಕ್ರೈಸ್ತ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಕನ್ಯಾ ಮೇರಿಯಮ್ಮನವರ ಜನ್ಮದಿನದ ಪ್ರಯುಕ್ತ ಆಚರಿಸಲಾಗುವ ಮೊಂತಿ ಹಬ್ಬವು ಕುಂದಾಪುರದ ರೋಜರಿ ಮಾತಾ ದೇವಾಲಯ (ಚರ್ಚ್)ದಲ್ಲಿ ಮಂಗಳವಾರ ವಿಜೃಂಭಣೆಯೊಂದಿಗೆ ಸಂಪನ್ನಗೊಂಡಿತು.

ಚರ್ಚ್ ನ ಧರ್ಮಗುರುಗಳಾದ ವಂ. ರೋಲ್ವಿನ್ ಫೆರ್ನಾಂಡಿಸ್ ರವರು ಹೊಸ ತೆನೆಗಳನ್ನು ಆಶೀರ್ವದಿಸಿದರು. ಪ್ರಧಾನ ಧರ್ಮಗುರುಗಳಾದ ವಂ. ಪೌಲ್ ರೇಗೊರವರು ಪವಿತ್ರ ಬಲಿಪೂಜೆಯನ್ನು ಭಕ್ತಿಪೂರ್ವಕವಾಗಿ ನೆರೆವೇರಿಸಿದರು. ಹೊಸ ಬೆಳೆಯೊಂದಿಗೆ ಪ್ರೀತಿ ಸಂತೋಷದಿಂದ ಕುಟುಂಬದೊಂದಿಗೆ ಕೂಡಿ ಹಬ್ಬವನ್ನು ಆಚರಿಸುವಂತೆ ಕರೆ ನೀಡಿದರು.

ಬಲಿಪೂಜೆಯ ನಂತರ ವಾಹನಗಳ ಆಶೀರ್ವಚನ ನಡೆಸಲಾಯಿತು.  ಹಾಗೆಯೇ ಹಿರಿಯರಿಗೆ ತೆನೆಯನ್ನು ಹಾಗೂ ಮಕ್ಕಳಿಗೆ ಕಬ್ಬುಗಳನ್ನು ಹಂಚಲಾಯಿತು.


Aware others:

Leave a Reply

Your email address will not be published. Required fields are marked *

error: Content is protected !!