AgricultureBlogCulturalEconomyEntertainmentFashionHighlightsHuman storiesLifestyleOthersSuccess storiesTop StoriesTrending

ಕೋಟ ಸಹಕಾರಿ ವ್ಯವಸಾಯಕ ಸಂಘದ 29ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಶೇ.16% ಡಿವಿಡೆಂಡ್ ಘೋಷಣೆ

Aware others:

ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘವು 2025-26ನೇ ಸಾಲಿನ ವರದಿಯನ್ನು ವಾಚಿಸಿ, ಸಂಘವು 13 ಶಾಖೆಗಳನ್ನು ಹೊಂದಿ ಉತ್ತಮ ಪ್ರಗತಿ ಸಾಧಿಸಿ, ವರದಿ ಸಾಲಿನಲ್ಲಿ ರೂ. 329.29 ಕೋಟಿ ಠೇವಣಿ, ರೂ. 263.57 ಕೋಟಿ ಸಾಲ ಹೊರಬಾಕಿಯಿದ್ದು, ರೂ. 2,061,.00 ಕೋಟಿ ವ್ಯವಹಾರ ಮಾಡಿ ರೂ.5.88 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.16ರ ಡಿವಿಡೆಂಡ್ ಘೋಷಿಸಿತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಂಘದ ಅಧ್ಯಕ್ಷ ಡಾ. ಕೃಷ್ಣ ಕಾಂಚನ್ ಹೇಳಿದರು.

ಅವರು ಭಾನುವಾರ ವಿವೇಕ ಪದವಿ ಪೂರ್ವ ಕಾಲೇಜು, ಕೋಟ ಇದರ ಮಹಾತ್ಮಾ ಗಾಂಧಿ ಸಭಾ ಭವನದಲ್ಲಿ ನಡೆದ 69ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಕೋಟ ಸಹಕಾರಿ ವ್ಯವಸಾಯಕ ಸಂಘ ನಿ. ಕೋಟ, ಕುಂದಾಪುರ ರೂರಲ್ ಆರ್ಯುವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಅಮೃತೇಶ್ವರಿ ಶಿಕ್ಷಣ ಸಂಸ್ಥೆ, ಗೀತಾನಂದ ಪೌಂಡೇಶನ್, ಕೋಟ ಮತ್ತು ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇವರ ಸಹಯೋಗದೊಂದಿಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಚಿಕಿತ್ಸೆ ಹಾಗೂ ಔಷಧ ವಿತರಣೆ ಕಾರ್ಯಕ್ರಮವನ್ನು ಗೀತಾನಂದ ಪೌಂಡೇಶನ್‌ನ ಪ್ರವರ್ತಕರಾದ ಶ್ರೀ ಆನಂದ ಸಿ. ಕುಂದರ್ ಇವರು ಉದ್ಘಾಟಿಸಿದರು. ಅಡಿಕೆ ಗಿಡಗಳ ನರ್ಸರಿ ಮತ್ತು ’ಸಕಲ’ ಕೃಷಿ ಉಪಕರಣ, ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಯನ್ನು ಶ್ರೀ ದುರ್ಗಾಪರಮೇಶ್ವರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟೀಲು ಇದರ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು. ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ಸಹಯೋಗದೊಂದಿಗೆ ನಡೆದ ಉಚಿತ ನೇತ್ರ ತಪಾಸಣೆ ಮತ್ತು ಪೊರೆ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಸಂಘದ ನಿವೃತ್ತ ಸಹಾಯಕ ಕಾರ್ಯನಿರ್ವಹಣಾಧಿಕಾರಿ  ಭಾಸ್ಕರ ಶೆಟ್ಟಿ ಉದ್ಘಾಟಿಸಿದರು.

ಬಳಿಕ 2026ನೇ ಸಾಲಿನ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೀಜಾಡಿ(ಪಡು) ಇಲ್ಲಿನ ಮುಖ್ಯ ಶಿಕ್ಷಕಿ ಪಾರ್ವತಿ ಎಮ್, ಶ್ರೀ ಗುರುಭ್ಯೋ ನಮಃ ಪುರಸ್ಕೃತ ಶ್ರೀ ನರೇಂದ್ರ ಕುಮಾರ್, 2026ನೇ ಸಾಲಿನ ಆದರ್ಶ ಶಿಕ್ಷಕ ಪ್ರಶಸ್ತಿ ಶಿಕ್ಷಕ ಪುರಸ್ಕೃತ ಸುಜಯೀಂದ್ರ ಹಂದೆ, 2024-25ನೇ ಸಾಲಿನ ಪುರುಷರ ವಿಭಾಗದ ಭತ್ತದ ಬೆಳೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜಯರಾಮ ಶೆಟ್ಟಿ, 2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ 600 ಕ್ಕೆ 597 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ ಗಳಿಸಿದ ಪ್ರಥ್ವೀಧರ ಎಲ್ ಕಾರಂತ, 2025-26ನೇ ಸಾಲಿಸ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಕ್ಕೆ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ರ್‍ಯಾಂಕ್ ಪಡೆದ ಕುಮಾರಿ ತಕ್ಷ ಪಿ ಶೆಟ್ಟಿ, ಫುಟ್ಬಾಲ್ ಕ್ರೀಡೆಯಲ್ಲಿ ಭಾರತದ ಅಂಡರ್ 19 ಫುಟ್ಬಾಲ್ ತಂಡಕ್ಕೆ ಆಯ್ಕೆಯಾದ ಹರ್ಷಿತ್ ಬಿ ಹಾಗೂ ಸಂಘದ ಹಿರಿಯ ಸದಸ್ಯರುಗಳನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯವ್ಯಾಪ್ತಿಯ ಶಾಲೆಗಳ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅಧಿಕ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಪುರಸ್ಕರಿಸಲಾಯಿತು. ಅಂಗವಿಕಲ ದತ್ತಿನಿಧಿ ಮತ್ತು ಕೃಷಿ ಆವರ್ತನಾ ನಿಧಿ ವಿತರಿಸಲಾಯ್ತು.

ಗೀತಾನಂದ ಪೌಂಡೇಶನ್, ಕೋಟ ಇದರ ಪ್ರವರ್ತಕ ಆನಂದ ಸಿ. ಕುಂದರ್, ಸಂಘದ ಉಪಾಧ್ಯಕ್ಷ ರವೀಂದ್ರ ಕಾಮತ್,  ನಿರ್ದೇಶಕರುಗಳಾದ ಜಿ. ತಿಮ್ಮ ಪೂಜಾರಿ, ಕೆ. ಉದಯ ಕುಮಾರ್ ಶೆಟ್ಟಿ, ಟಿ. ಮಂಜುನಾಥ, ಮಹೇಶ ಶೆಟ್ಟಿ, ರಶ್ಮಿತಾ, ರಂಜಿತ್ ಕುಮಾರ್, ಚಂದ್ರ ಪೂಜಾರಿ ಪಿ.,  ವಸಂತಿ ಪೂಜಾರ್ತಿ, ಜಿ. ಅಜಿತ್ ದೇವಾಡಿಗ,  ಪ್ರೇಮಾ, ರಾಘವೇಂದ್ರ ಮಧ್ಯಸ್ಥ, ದಿನಕರ ಶೆಟ್ಟಿ, ಪಿ. ಶೇಖರ ಮರಕಾಲ ಮತ್ತು ರಾಜಾರಾಮ ಶೆಟ್ಟಿ ಇವರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕ, ವಕೀಲ ಟಿ. ಮಂಜುನಾಥ ಗಿಳಿಯಾರು ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ ಕುಮಾರ್ ಶೆಟ್ಟಿ ವಂದಿಸಿದರು. ಕುಮಾರಿ ನಿಶಾ ಆರ್. ಪೂಜಾರಿ ಪ್ರಾರ್ಥಿಸಿದರು. ಸಂಘದ ಸಿಬ್ಬಂದಿ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!