BlogCulturalEducationGovernmentHighlightsHuman storiesLifestyleLocal newsOthersPoliticsReligionState newsTop StoriesTrending

ಈದ್ ಮಿಲಾದ್ – ಉಡುಪಿ, ದಕ್ಷಿಣ ಕನ್ನಡದಲ್ಲಿ ಆಗಸ್ಟ್ 26ರ ಬದಲು 25ಕ್ಕೆ ಸಾರ್ವತ್ರಿಕ ರಜೆ! ಜಿಲ್ಲಾಡಳಿತಕ್ಕೆ ಅಧಿಕಾರ ನೀಡಿದ ರಾಜ್ಯ ಸರ್ಕಾರ

Aware others:

ಕುಂದಾಪುರ: ಈ ವರ್ಷದ ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಮಿಲಾದ್ ಹಬ್ಬವು ಕ್ಯಾಲೆಂಡರ್ ಪ್ರಕಾರ್ ಆಗಸ್ಟ್ 26ರಂದು ನಿಗಧಿಯಾಗಿದ್ದು, ಮುಸ್ಲಿಂ ಸಂಘಟನೆಗಳ ಬೇಡಿಕೆಯಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25ರಂದು ನೀಡಲು ಆಯಾ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರ ಅಧಿಕಾರ ನೀಡಿ ಆದೇಶ ಮಾಡಿದೆ.

ಈ ಬಗ್ಗೆ ಅಧಿಕೃತ ಆದೇಶ ಹೊರಬೀಳದೇ ಇದ್ದರೂ ಇಂದು ಸಂಜೆಯೊಳಗೆ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.  ಈ ಬಗ್ಗೆ ಮುಸ್ಲಿಂ ಸಂಘಟನೆಗಳು ಸಚಿವ ಯು.ಟಿ.ಖಾದರ್ ಅವರಿಗೆ ಮನವಿ ಮಾಡಿದ್ದು, ಮುಸ್ಲಿಂ ನಾಯಕರ ಮನವಿಯನ್ನು ಪರಿಗಣಿಸಿ ರಜೆ ದಿನಾಂಕವನ್ನು ಒಂದು ದಿನ ಮೊದಲೇ ನಿಗಧಿಪಡಿಸುವ ವಿವೇಚನೆಯನ್ನು ಆಯಾ ಜಿಲ್ಲಾಡಳಿತಕ್ಕೆ ನೀಡಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!