BlogCulturalEconomyEducationEntertainmentFashionHighlightsHuman storiesLifestyleLocal newsSportsSuccess storiesTop StoriesTrending

ಸಿಐಎಸ್‌ಸಿಇ ಹ್ಯಾಂಡ್ ಬಾಲ್  ಪಂದ್ಯಾವಳಿಯಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

Aware others:

ಕುಂದಾಪುರ: ಶಿವಮೊಗ್ಗದ ಮಾನಸ ಇಂಟರ್ ನ್ಯಾಶನಲ್ ಸ್ಕೂಲ್‌ನಲ್ಲಿ ನಡೆದ ಸಿಐಎಸ್‌ಸಿಇ ಹ್ಯಾಂಡ್ ಬಾಲ್  ಪಂದ್ಯಾವಳಿಯಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 17 ವರ್ಷದೊಳಗಿನ ವಿದ್ಯಾರ್ಥಿನಿಯರ ತಂಡ ಪ್ರಥಮ, 17 ವರ್ಷದೊಳಗಿನ ಹುಡುಗರ ತಂಡ ದ್ವಿತೀಯ,  14 ವರ್ಷದೊಳಗಿನ ಹುಡುಗರ ತಂಡ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

17 ವರ್ಷದೊಳಗಿನ ವಿದ್ಯಾರ್ಥಿನಿಯರ ವಿಭಾಗದಲ್ಲಿ ನಿರೀಕ್ಷಾ ಜಿ ಬಿ, ಶುಚಿ ಗೌಡ, ದೀಕ್ಷಾ ಕೆ ಸಿ, ಆದ್ಯಾ ಶೆಟ್ಟಿ, ನವ್ಯಾ ಐ ಎಮ್, ಸಾನ್ವಿ ಕೆ ಎಸ್, ಆರಾಧ್ಯಾ ಬಿ ಟಿ, ವರ್ಷಿಣಿ ಐ ಪಿ, ರಾಣಿ ಕೆ, ಪ್ರಕೃತಿ, ಶ್ರೀಜಾ ಕೆ, ಲಕ್ಷ್ಮಿ ಹಾಗೂ ಹುಡುಗರ ವಿಭಾಗದಲ್ಲಿ ತರುಣ್ ಹೆಚ್ ಬಿ, ಚಿರಾಯು, ಸೃಜನ್ ಆರ್ ಹೆಚ್, ಹೃಷೀಕೇಶ, ರಾಘವೇಂದ್ರ ಬಿ, ಪ್ರತೀಕ ಛಾತ್ರ, ಉತ್ತಮ್ ಬಿ, ಸಂಗಮೇಶ್ ಬಿ, ಸಿದ್ಧಾರ್ಥ ವೈ ಸಿ, ಸಿದ್ಧಲಿಂಗ ಪಿ ಒ, ಪ್ರೇಮ್ ಎಮ್ ಕೆ, ದೀಕ್ಷಿತ್ ಸಿ, ಪ್ರಕಾಶ್ ಆರ್ ಕೆ, ಬಾಪೂಗೌಡ ಪಿ ಎಮ್, ಆಶಿಷ್ ಎಸ್ ಜಿ, ಆದಿತ್ಯ ಪಿ ಹೆಚ್ ಭಾಗವಹಿಸಿದ್ದರು.

14 ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ಸಿದ್ಧಾರ್ಥ ಕೆ, ಈಶ್ವರ್ ಎಸ್ ಜಿ, ಓಂಕಾರ್ ಕೆ, ಸಮರ್ಥ ಹೆಚ್, ಯಶವಂತ್ ಎ ಎಸ್, ಮನ್ವಿತ್ ಜಿ ಎಸ್, ಶ್ರೇಯಸ್ ಎಸ್ ಎಸ್, ವೇದಾಂತ್ ಆರ್ ಎ, ಆದಿತ್ಯ ಎಸ್ ಎನ್, ಸಾಯಿದೀಪ್ ಎಮ್ ಬಿ, ವರುಣ್ ಸಾಯಿ ಬಿ ಕೆ, ಅಕುಲ್‌ರಾಜ್ ಕತ್ತಿಮತಿ, ಸಾತ್ವಿಕ್ ಎನ್ ಟಿ, ವಿನಯ ಜಿ ಹೆಚ್ ಭಾಗವಹಿಸಿದ್ದರು.

ಯಶಸ್ಸಿಗೆ ಕಾರಣರಾದ ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಅವರಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರು ಹಾಗೂ ತರಬೇತುದಾರರ ಶ್ರಮವನ್ನು ಪ್ರಾಂಶುಪಾಲ ಮತ್ತು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಶರಣ ಕುಮಾರ ಹಾಗೂ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಮತ್ತು ತರಬೇತುದಾರರು ಅಭಿನಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!