ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ವೈಟ್ ಝೋನ್ ಅಧ್ಯಕ್ಷರಾಗಿ ಹುಸೇನ್ ಹೈಕಾಡಿ ಅಧಿಕಾರ ಸ್ವೀಕಾರ
ಕುಂದಾಪುರ : ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ಇದರ ಅಧ್ಯಕ್ಷರಾಗಿ ಹುಸೇನ್ ಹೈಕಾಡಿಯವರು ಆಯ್ಕೆಯಾದರು. ಲಯನ್ 317 ಸಿ ಯಾ ಎಲ್ ಸಿ ಐ ಎಫ್ ಸಂಯೋಜಕರಾದ ಎಮ್ ಜೆ ಎಫ್ ಲಯನ್ ಹೃಷಿಕೇಶ್ ಹೆಗ್ಡೆ ಯವರು ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ನೀಡಿದರು. ಬಳಿಕ ಮಾತನಾಡಿದ ಅವರು, ನಾಯಕತ್ವ ಎಂಬುದು ಒಂದು ಸಾಮೂಹಿಕ ಕ್ರಿಯೆ ಎಂಬುದನ್ನು ಲಯನ್ಸ್ ಬಲವಾಗಿ ನಂಬಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಸಧ್ಯಸ್ಯನಲ್ಲೂ ನಾಯಕತ್ವ ಗುಣವನ್ನು ಬೆಳೆಸಿವುದು ನಮ್ಮ ಉದ್ದೇಶ, ಪ್ರತಿಯೊಬ್ಬರೂ ತಮ್ಮ ಕ್ಷೇತ್ರ ದಲ್ಲಿ ತಮ್ಮ ಚಾಪನ್ನು ಮೂಡಿಸಬೇಕಾದರೆ ನಾಯಕತ್ವದ ಶಕ್ತಿ ಬಹುಮುಖ್ಯವಾಗಿರುತ್ತದೆ ಎಂದು ಹೇಳಿದರು.

ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜದ ಕಟ್ಟಕಡೆಯ ಮನುಷ್ಯ ಕೂಡ ಗೌರವಯು ತವಾದ ಬದುಕನ್ನು ಬಾಳಬೇಕು. ಇದು ಲಯನ್ಸ್ ನ ನಿಜವಾದ ಆಶಯ. ಹಲವಾರು ಕಾರಣ ಗಳಿಂದ ಇಂದು ಕೋಟ್ಯಾoತರ ಜನರು ಬಡತನ ದಿಂದ ಬದುಕುವoತಾಗಿದೆ, ಅವರಿಗೆ ಗೌರವಯುತವಾದ ಬದುಕನ್ನು ನೀಡಬೇಕಂದರೆ ಅವರನ್ನು ಬಡತನದಿಂದ ಬಿಡುಗಡೆಗೊಳಿಸಬೇಕಾಗಿದೆ ಎಂದರು.
ಲಯನ್ ಜಿಲ್ಲಾ 317 ಸಿ ಯಾ ಪ್ರಾಂತಿಯ ಅಧ್ಯಕ್ಷರಾದ ಪ್ರತಾಪಚಂದ್ರ ಶೆಟ್ಟಿ, ಸದಸ್ಯರು ರಕ್ತದಾನದ ಮೂಲಕ ಇನ್ನೊಬ್ಬರ ಪ್ರಾಣ ಉಳಿಸಬಹುದು. ಲಯನ್ಸ್ ಕ್ಲಬ್ ರಕ್ತದಾನಕ್ಕೂ ಬಹಳ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದರು. ಲಯನ್ಸ್ ಜಿಲ್ಲಾ ವಲಯ ಅಧ್ಯಕ್ಷ ಮೊಹಮ್ಮದ್ ಅಶ್ರಫ್, ನಮ್ಮ ದೇಶದಲ್ಲಿ ಅಪಾರವಾದ ಮಾನವ ಸಂಪನ್ಮೂಲ ಇದೆ, ಇದನ್ನು ರಾಷ್ಟ್ರದ ಅಭಿವೃದ್ಧಿಗೆ ಬಳಸಿಕೊಳ್ಳುವುದು ಅತ್ಯಂತ ಮುಖ್ಯ ಎಂದರು.
ಜ್ಞಾನ ಕೌಶಲ್ಯ ಹಾಗು ಜೀವನ ಮೌಲ್ಯಗಳನ್ನು ಹೆಚ್ಚಿಸುವುದು ವಿದ್ಯಾಭ್ಯಾಸ ದ ಮೂಲ ಆಶಯ ಆದರೆ ಕೆಲವೊಂದು ಕಾರಣದಿಂದಾಗಿ ಸಾರ್ವರ್ತಿಕ ಸಾಕ್ಷಾರತೇ ಸಾಧ್ಯವಾಗುತ್ತಿಲ್ಲ, ಲಯನ್ಸ್ ಸಂಸ್ಥೆಗಳು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಡಬೇಕಾಗಿದೆ ಎಂದು ಲಯನ್ಸ್ 317 ಸಿ ಯಾ ಜಿ ಎಮ್ ಟಿ ಸಂಯೋಜಕ ರೋವನ್ ಡಿ ಕೋಸ್ಟ ಹೇಳಿದರು.
ಈ ಸಂದರ್ಭ ಶಿಕ್ಷಣ ಹಾಗು ವೈದ್ಯಕೀಯ ನೆರವನ್ನು ಹೇಮಲತಾ ಹಾಗು ಪ್ರಜ್ವಲ್ ರವರಿಗೆ ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ನ ಅಧ್ಯಕ್ಷರಾದ ಹುಸೇನ್ ಹೈಕಾಡಿ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ವಿಜಯ ಭಂಡಾರಿ ಸ್ವಾಗತಿಸಿದರು. ಉಪಾಧ್ಯಕ್ಷ ಪ್ರಸನ್ನ ಕುಮಾರ್, ತ್ರಿವಿಕ್ರಮ ನಾಯಕ್ ದ್ವಜವಂದನೆ ಹಾಗು ಲಯನ್ಸ್ ನೀತಿ -ಸಂಹಿತೆ ಓದಿದರು. ರಾಘವೇಂದ್ರ ಚರಣ್ ನಾವಡ, ಕಿರಣ್ ದೇವಾಡಿಗ ಸಂದೀಪ್ ಕಾಮತ್ ಅತಿಥಿಗಳನ್ನು ಪರಿಚಯ ಮಾಡಿದರು. ಕಾರ್ಯದರ್ಶಿ ಪ್ರದೀಪ್ ಬಂಗೇರ ವಂದಿಸಿದರು.
