AgricultureBlogEntertainmentFashionHighlightsHuman storiesLifestyleLocal newsNatureOthersTop StoriesTrending

ಕುಂದಾಪುರ: ಕಾಳಾವರದಲ್ಲಿ ಹೆಬ್ಬಾವು ರಕ್ಷಿಸಿದ ಸಾಲಿಗ್ರಾಮದ ಸುಧೀಂದ್ರ ಐತಾಳ್– ವನ್ಯಜೀವಿಗಳ ರಕ್ಣಣೆ ಜವಾಬ್ಧಾರಿ ಎಂದ ಅಜಿತ್ ಶೆಟ್ಟಿ

Aware others:

ಕುಂದಾಪುರ: ಇಲ್ಲಿನ ಕಾಳಾವರ ಎಂಬಲ್ಲಿ ಸಾರ್ವಜನಿಕರಿಗೆ ಕಾಣಿಸಿಕೊಂಡಿದ್ದ ಹೆಬ್ಬಾವನ್ನು ಸಾಲಿಗ್ರಾಮದ ವನ್ಯಜೀವಿ ಹಾಗೂ ಹಾವು ಸಂರಕ್ಷಣಾ ಕಾರ್ಯಕರ್ತ ಸುಧೀಂದ್ರ ಐತಾಳ ಅವರು ಸುರಕ್ಷಿತವಾಗಿ ರಕ್ಷಿಸಿ, ಸಂಬಂಧಿತ ಅಧಿಕಾರಿಗಳ ಮಾರ್ಗಸೂಚಿಯಂತೆ ಸೂಕ್ತ ನೈಸರ್ಗಿಕ ಆವಾಸ ಪ್ರದೇಶಕ್ಕೆ ಬಿಡಲಾಯಿತು.

ಈ ಸಂದರ್ಭದಲ್ಲಿ  ಸುಧೀಂದ್ರ ಐತಾಳರ ಜೊತೆಗಿದ್ದ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಶೆಟ್ಟಿ ಅವರು, ವನ್ಯಜೀವಿಗಳು ನಮ್ಮ ಪರಿಸರದ ಅವಿಭಾಜ್ಯ ಅಂಗವಾಗಿದ್ದು, ಅವುಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಹಾವುಗಳು ಕಂಡುಬಂದಾಗ ಅವುಗಳಿಗೆ ಹಾನಿ ಮಾಡದೆ ತಕ್ಷಣ ಅರಣ್ಯ ಇಲಾಖೆ ಅಥವಾ ಪರಿಣಿತ ರಕ್ಷಕರಿಗೆ ಮಾಹಿತಿ ನೀಡಬೇಕು. ಸುಧೀಂದ್ರ ಐತಾಳರು ಹಲವು ವರ್ಷಗಳಿಂದ ಸ್ವಂತ ವೆಚ್ಚದಲ್ಲಿ ವನ್ಯಜೀವಿ ಹಾಗೂ ಹಾವುಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡು ಪರಿಸರ ಸಂರಕ್ಷಣೆಗೆ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸೇವಾ ಮನೋಭಾವಕ್ಕೆ ಸಮಾಜದಿಂದ ಪ್ರೋತ್ಸಾಹ ಮತ್ತು ಸಹಕಾರ ದೊರೆಯಬೇಕು ಎಂದು ಮನವಿ ಮಾಡಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!