ನೀಟ್ ಫಲಿತಾಂಶ; ಸುಜ್ಞಾನ ಪಿಯು ಕಾಲೇಜು ಕುಂದಾಪುರಕ್ಕೆ ಪ್ರಥಮ

579 / 720 (ALL INDIA RANK 2135),
ಕುಂದಾಪುರ: ಇತ್ತೀಚೆಗೆ ಪ್ರಕಟಗೊಂಡ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-2026) ಫಲಿತಾಂಶದಲ್ಲಿ ಕುಂದಾಪುರದ ಸುಜ್ಞಾನ ಪಿಯು ಕಾಲೇಜಿನ ಪ್ರಥಮ ಬ್ಯಾಚ್ ನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಅಭೂತಪೂರ್ವ ಕೀರ್ತಿ ತಂದಿದ್ದಾರೆ. ಕೇವಲ 8 ವಿದ್ಯಾರ್ಥಿಗಳಿಂದ ಆರಂಭವಾದ ಈ ಸಂಸ್ಥೆಯು ತನ್ನ ಮೊದಲ ಪ್ರಯತ್ನದಲ್ಲೇ ಕುಂದಾಪುರ, ಬೈಂದೂರು, ಬ್ರಹ್ಮಾವರ ಹಾಗೂ ಹೆಬ್ರಿ ತಾಲೂಕುಗಳ ಎಲ್ಲಾ ಪಿಯು ಕಾಲೇಜುಗಳಿಗಿಂತ ಅತ್ಯುತ್ತಮವಾದ ಫಲಿತಾಂಶ ಪಡೆದು ಅಗ್ರಸ್ಥಾನದಲ್ಲಿದೆ.ಈ ಕಾಲೇಜಿನ ಪ್ರಥಮ ಬ್ಯಾಚ್ ನ ವಿದ್ಯಾರ್ಥಿಯಾದ ಸಮ್ಮೇದ ಪಾರೀಸ ಬೋಜ 720ಕ್ಕೆ 579 ಅಂಕ ಪಡೆದು ರಾಷ್ಟ್ರ ಮಟ್ಟದ 2135ನೇ ರ್ಯಾಂಕ್ ಮೂಲಕ ಶ್ರೇಷ್ಠ ಸಾಧನೆ ಮಾಡಿದ್ದಾರೆ.

537 / 720 (ALL INDIA RANK 23941)
ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಪ್ರತಿಭೆ ಸಮ್ಮೇದ ಪಾರೀಸ ಬೋಜ, ಎಸ್ಎಸ್ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮುಗಿಸಿದ್ದರು. ಆ ಮೂಲಕ ಭಾಷೆ ಅಥವಾ ಗ್ರಾಮೀಣ ಹಿನ್ನೆಲೆ ಸಾಧನೆಗೆ ಎಂದಿಗೂ ಅಡ್ಡಿಯಾಗಲಾರದು ಎಂಬುದನ್ನು ಸಾಬೀತುಪಡಿಸಿ ಮಾದರಿಯಾಗಿದ್ದಾರೆ.

513 / 720 (ALL INDIA RANK 36395)
ಒಟ್ಟು 22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಪೈಕಿ 5 ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳನ್ನು ಗಳಿಸಿ ಸರ್ಕಾರಿ ಕೋಟದಡಿ ಎಂ.ಬಿ.ಬಿ.ಎಸ್ ಸೀಟ್ ಪಡೆಯುವ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ ಹಾಗೇ 17 ವಿದ್ಯಾರ್ಥಿಗಳು ನೀಟ್ ಅರ್ಹತೆ (Qualify) ಪಡೆದುಕೊಂಡಿದ್ದಾರೆ. ಸಮ್ಮೇದ ಪಾರೀಸ ಬೋಜ: 579 / 720 (ALL INDIA RANK 2135), ಇಂಚರಾ ಎಸ್ ಪೂಜಾರಿ (NEET ಅಕಾಡೆಮಿ ವಿದ್ಯಾರ್ಥಿನಿ): 537 / 720 (ALL INDIA RANK 23941), ಧನುಷ್ ದೇವಾಡಿಗ (NLT): 513 / 720 (ALL INDIA RANK 36395), ಸುಶ್ಮಿತಾ ಪ್ರವೀಣ್ ಕುಮಾರ್ ಸುಕಾಲಿ: 451 / 720 (ALL INDIA RANK 20144), ಜಯರಾಜ್ ಜೆ.ಎಸ್: 431 / 720 (ALL INDIA RANK 14955*) ಅಂಕ ಪಡೆದುಕೊಂಡಿದ್ದಾರೆ

451 / 720 (ALL INDIA RANK 20144)
ಕಾಲೇಜಿನ ವಿದ್ಯಾರ್ಥಿಗಳಾದ ರಮ್ಯಶ್ರೀ ಸಿದ್ದಪ್ಪ ಅಣಜಿ, ಲಕ್ಷ್ಮಿ ಅವಣ್ಣ ವಡೇರ್, ರಿತೇಶ್ ಎಂ.ಎಸ್, ಕೌಶಿಕ್ ಶೆಟ್ಟಿ, ಸೋಹಮ್ ಮಾಹದೇವ ಯಲಿಗಾರ, ಶೀತಲ್ ಕುಮಾರ್ ಶೆಟ್ಟಿ, ಸೃಷ್ಠಿ ಶಿವಾಜಿ ನಲವಾಡೆ, ವಿನಯ್ ಗಡ್ಡಿ, ಸೋಮನ್ ಗೌಡ, ಪೃಥ್ವಿ ನಾಗಪ್ಪ ರಾಮಣ್ಣವರ್, ಭರತ್ ಕುಮಾರ್ ನಾಯ್ಕ್ ಕೆ.ಎಂ., ವಿನಯ್ ಸುಕುಮಾರ್ ದಿಬ್ಬದ್, ರಕ್ಷಿತ ರಂಗಪ್ಪ ದಾಸರ್, ದರ್ಶನ್ ಪವಾರ್, ಪ್ರದೀಪ್ ಬಸವಣ್ಣೆಪ್ಪ ಚಲ್ಕೊಪ್ಪ, ತನು ಎಸ್ ಮತ್ತು ಅಲಿಝಾ ಕರಮತ್ತುಲ್ಲಾ ಅವರು ವಿವಿಧ ಮೆಡಿಕಲ್ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ಅರ್ಹತೆ ಗಳಿಸಿದ್ದಾರೆ.

(ALL INDIA RANK 14955*)
ಪ್ರಥಮ ವರ್ಷದಲ್ಲೇ ಈ ಅಪ್ರತಿಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಕಾಲೇಜಿನ ಪ್ರಾಂಶುಪಾಲ ರಂಜನ್ ಬಿ. ಶೆಟ್ಟಿ ಅವರು ಅಭಿನಂದಿಸಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡಿ ಈ ಯಶಸ್ಸಿಗೆ ಕಾರಣರಾದ ಕಾಲೇಜಿನ ಉಪನ್ಯಾಸಕ ವೃಂದವನ್ನು ಆಡಳಿತ ಮಂಡಳಿ ಅಭಿನಂದಿಸಿದೆ.
