ಕೊಲ್ಲೂರು: ಕಳ್ಳಿಯರ ಬಗ್ಗೆ ಮಾಹಿತಿ ನೀಡಿದ ಬಾತ್ಮೀದಾರರಿಗೆ ಪೊಲೀಸ್ ಸಮ್ಮಾನ
ಕುಂದಾಪುರ: ಎರಡು ದಿನಗಳ ಹಿಂದೆ ಕೊಲ್ಲೂರು ದೇವಸ್ಥಾನದಲ್ಲಿ ನಡೆದ 80 ಸಾವಿರ ಹಣ ಕಳ್ಳತನ ಪ್ರಕರಣ ಶೀಘ್ರ ಬೇಧಿಸಲು ಆರೋಪಿ ಕಳ್ಳಿಯರ ಬಗ್ಗೆ ಸರಿಯಾದ ಮಾಹಿತಿ ನೀಡಿದ ಕೊಲ್ಲೂರಿನ ರಿಕ್ಷಾ ಚಾಲಕರಾದ ನವೀನ್ ಪೂಜಾರಿ ದಳಿ ಮತ್ತು ಬೈಂದೂರಿನ ಗಣೇಶ್ ಆಚಾರಿ ಬಂಕೇಶ್ವರ ಎಂಬುವವರನ್ನು ಕುಂದಾಪುರ ಪೊಲೀಸ್ ಉಪಾಧೀಕ್ಷಕರು ತಮ್ಮ ಕಚೇರಿಯಲ್ಲಿ ಗೌರವಿಸಿ ಸಮ್ಮಾನಿಸಿದರು.

ಈ ಸಂದರ್ಭ ಪೊಲೀಸ್ ನಿರೀಕ್ಷಕರಾದ ಜಯರಾಮ ಗೌಡ, ಸಂತೋಷ್ ಕೈಕಿಣಿ, ಶಿವಕುಮಾರ ಮತ್ತು ಕೊಲ್ಲೂರು ಠಾಣೆ ಉಪ-ನಿರೀಕ್ಷಕ ವಿನಯ ಕೊರ್ಲಹಳ್ಳಿ, ಭೀಮಾ ಶಂಕರ ಮತ್ತು ಕುಂದಾಪುರ ಉಪವಿಭಾಗದ ಇಲ್ಲ ಅಧಿಕಾರಿಗಳು ಹಾಜರಿದ್ದರು.
