ಕುಂದಾಪುರ: ಸಚಿವ ಖಾದರ್ ಗೆ ಕುಂದಾಪ್ರ ಕನ್ನಡ ಸಾಂಸ್ಕೃತಿಕ ಮತ್ತು ಚಿತ್ರಕಲಾ ಸ್ಪರ್ಧೆ ವಾಲ್ಬೆಲ್ಲ ಆಮಂತ್ರಣ ನೀಡಿ ಸ್ವಾಗತ

ಕುಂದಾಪುರ: ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ಸೋಮವಾರ (ಜುಲೈ 6) ನಡೆಯುವ ಕುಂದಾಪ್ರ ಕನ್ನಡ “ವಾಲ್ಬೆಲ್ಲ” ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಆರೋಗ್ಯ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ಅವರಿಗೆ ಕುಂದಾಪುರದ ಯುವ ಮನೀಶ್ ಹೊಟೇಲ್ ನಲ್ಲಿ ನೀಡಿ ಸ್ವಾಗತಿಸಲಾಯಿತು.

ಆಮಂತ್ರಣ ಸ್ವೀಕರಿಸಿ ಮಾತನಾಡಿದ ಸಚಿವ ಖಾದರ್, ಉಸ್ತುವಾರಿಯಾಗಿ ಉಡುಪಿ ಜಿಲ್ಲೆಯ ಜವಾಬ್ಧಾರಿ ನನ್ನ ಮೇಲಿದೆ. ಕುಂದಾಪ್ರ ಕನ್ನಡ ಕೇವಲ ಭಾಷೆಯಲ್ಲ, ಅದೊಂದು ಶಕ್ತಿ. ಇಲ್ಲಿನ ಉಡುಗೆ ತೊಡುಗೆ, ಆಹಾರ ಪದ್ಧತಿ, ಸಂಸ್ಕೃತಿ – ಸಂಪ್ರದಾಯ ಎಲ್ಲದರಲ್ಲಿಯೂ ಕುಂದಾಪ್ರ ಕನ್ನಡದ ಸೊಗಡಿದೆ. ಕುಂದಾಪ್ರ ಕನ್ನಡದ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಹೇಳಿದರು.

ಈ ಸಂದರ್ಭ ಮಾಜೀ ಸಚಿವ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯರಾದ ಕೆ. ಜಯಪ್ರಕಾಶ್ ಹೆಗ್ಡೆ, ಕೆ.ಸಿ.ರಾಜೇಶ್, ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಕೋಶಾಧಿಕಾರಿ ಭರತ್ ಶೆಟ್ಟಿ, ಮುಖ್ಯೋಪಾದ್ಯಾಯ ಪ್ರದೀಪ್ ಶೆಟ್ಟಿ, ಸಿಟಿ ಜೇಸಿಸ್ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ ಮೊದಲಾದವರು ಇದ್ದರು.
