ಶಿವಾನಿ ರಾವ್‌ಗೆ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ
ಕುಂದಾಪುರ: ಕೆಡಿಎಫ್ ಕರಾಟೆ & ಫಿಟ್ನೆಸ್ ಅಕಾಡೆಮಿ, ಕುಂದಾಪುರದ ಹೆಮ್ಮೆಯ ವಿದ್ಯಾರ್ಥಿನಿ ಶಿವಾನಿ ರಾವ್ ಉತ್ತರಾಖಂಡದ ಡೇರಾಡೂನ್‌ನಲ್ಲಿ ನಡೆದ 5ನೇ ಕಿಯೋ ರಾಷ್ಟ್ರೀಯ ಸಬ್ ಜೂನಿಯರ್, ಕ್ಯಾಡೆಟ್ ಮತ್ತು ಜೂನಿಯರ್ ಕರಾಟೆ ಚಾಂಪಿಯನ್‌ಶಿಪ್ – 2026 ನಲ್ಲಿ 8 ವರ್ಷದ ಬಾಲಕಿಯರ 20 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಕರ್ನಾಟಕ ರಾಜ್ಯಕ್ಕೆ, ಕುಂದಾಪುರಕ್ಕೆ ಹಾಗೂ ಕೆಡಿಎಫ್ ಕುಟುಂಬಕ್ಕೆ ಅಪಾರ ಹೆಮ್ಮೆ ತಂದಿದ್ದಾಳೆ.

ಇವಳು ವಿಶಾಲಾಕ್ಷಿ ಮತ್ತು ಚಂದ್ರಕಾಂತ್ ನೇರಂಬಳ್ಳಿ ಇವರ ಕಿರಿಯ ಮಗಳು. ಕೋಟೇಶ್ವರದ ಶಾಂತಿಧಾಮ ಪೂರ್ವ ಗುರುಕುಲ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ. ಕರಾಟೆ ಶಿಕ್ಷಕರಾದ ಕಿರಣ್ ಕುಂದಾಪುರ ಮತ್ತು ಸಂದೀಪ್ ವಿ. ಕಿರಣ್ ತರಬೇತಿ ನೀಡುತ್ತಿದ್ದಾರೆ.
