ಮೆಸ್ಕಾಂ ಖಾಸಗೀಕರಣ ವಿರೋಧಿಸಿ ಮಾಜೀ ಸಂಸದ ಜಯಪ್ರಕಾಶ್ ಹೆಗ್ಡೆಗೆ ಮನವಿ
ಕುಂದಾಪುರ: ಮೆಸ್ಕಾಂ ಖಾಸಗೀಕರಣವನ್ನು ವಿರೋಧಿಸಿ ಮೆಸ್ಕಾಂ ನೌಕರರ ಸಂಘದ ವತಿಯಿಂದ ಮಾಜಿ ಲೋಕಸಭಾ ಸದಸ್ಯರು ಹಾಗೂ ಮಾಜಿ ಸಚಿವ ಕೆ ಜಯಪ್ರಕಾಶ ಹೆಗ್ಡೆ ಅವರಿಗೆ ಖಾಸಗಿಕರಣದ ಕುರಿತಂತೆ ಮಾಹಿತಿಯನ್ನು ನೀಡಿ ಸರ್ಕಾರಕ್ಕೆ ಆಕ್ಷೇಪಣ ಪತ್ರವನ್ನು ನೀಡುವಂತೆ ಮನವಿ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಕೆ ಜಯಪ್ರಕಾಶ ಹೆಗ್ಡೆ, ರಾಜ್ಯದ ಇಂಧನ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳ ಜೊತೆ ಖುದ್ದಾಗಿ ಚರ್ಚಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ನೌಕರರ ಸಂಘದ ಉಡುಪಿಯ ಎನ್ ನವೀನ್ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬ್ರಹ್ಮಾವರ ಸತೀಶ ಹೆಚ್, ಎಸಿ ಎಸ್ ಟಿ ಕಲ್ಯಾಣ ಸಂಸ್ಥೆಯ ಸುರೇಶ ಬಾಬು, ಚಂದ್ರಶೇಖರ ರಾಥೋಡ್, ಕೋಟ ವಿಭಾಗದ ನೌಕರರ ಸಂಘದ ಅಧ್ಯಕ್ಷ ದಿನೇಶ ಪುತ್ರನ್ ವಿಠಲವಾಡಿ, ಬ್ರಹ್ಮಾವರ ನೌಕರರ ಸಂಘದ ಅಧ್ಯಕ್ಷ ರಾಘವೇಂದ್ರ ಶೆಟ್ಟಿಗಾರ್, ಕಾರ್ಯದರ್ಶಿ ವೈ ಸಂತೋಷ ಕುಮಾರ, ಮೇಲ್ವಿಚಾರಕ ಸಂತೋಷ ದೇವಾಡಿಗ ಹಾಗೂ ನೌಕರರ ಸಂಘದ ಸದಸ್ಯರು ಉಪಸ್ಥಿತರಿದ್ದರು.
