ಮಲ್ಲಿಗೆ ಕೃಷಿಯಲ್ಲಿ ಸ್ವಾವಲಂಬಿ ಬದುಕು ಸಾಧ್ಯ-ಜಯರಾಮ ಶೆಟ್ಟಿ
ಕೋಟದ ಪಂಚವರ್ಣ ಸಂಘಟನೆಯ ರೈತರೆಡೆಗೆ ನಮ್ಮ ನಡಿಗೆ 53ನೇ ಮಾಲಿಕೆ
ಕುಂದಾಪುರ: ಮಲ್ಲಿಗೆ ಕೃಷಿ ಒಂದು ಲಾಭದಾಯಕ ಬೆಳೆಯಾಗಿ ಸಾಕಷ್ಟು ಕೃಷಿಕರ ಕೈ ಹಿಡಿದಿದೆ, ಕೃಷಿಯಲ್ಲಿ ನಾನಾ ರೀತಿಯ ಇದೆ ಆದರೆ ಜನ ಒಂದೇ ಕೃಷಿ ಪದ್ಧತಿ ಅನುಸರಿಸುವುದರಿಂದ ಲಾಭದಾಯಕದಿಂದ ವಿಮುಖರಾಗುತ್ತಿದ್ದಾರೆ. ಸಮಗ್ರ ಕೃಷಿ ಪದ್ದತಿಯನ್ನು ಪ್ರತಿಯೊರ್ವ ರೈತರು ಅನುಸರಿಸಿದರೆ ಯಶಸ್ಸು ತಾನಾಗಿಯೇ ಬರುತ್ತದೆ ಮಲ್ಲಿಗೆ ಕೃಷಿಯಲ್ಲಿ ಸ್ವಾವಲಂಬಿ ಬದುಕು ಕಾಣಲು ಸಾಧ್ಯ ಎಂಬುವುದಕ್ಕೆ ಇತ್ತೀಚಿಗಿನ ವರ್ಷಗಳಲ್ಲಿ ಸಾಕಷ್ಟು ಮಹಿಳೆಯರೇ ಸಾಕ್ಷಿ,ಮನೆ ವಠಾರ ತಾರಸಿ ಮೇಲೆ ಇದನ್ನು ನಿರ್ವಹಿಸಿ ತೊರಿಸಿಕೊಟ್ಟಿದ್ದಾರೆ ಎಂದು ಕೋಟ ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ಹೇಳಿದರು.

ಬುಧವಾರ ಪಾಂಡೇಶ್ವರ ಯಡಬೆಟ್ಟು ಪರಿಸರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೆಳೆಯರ ಬಳಗ ಕಾರ್ಕಡ,ಸ್ನೇಹಕೂಟ ಮಣೂರು ಇವರ ಜಂಟಿ ಸಹಯೋಗದೊಂದಿಗೆ 53ನೇ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಲ್ಲಿಗೆ ಕೃಷಿ ಸಾಧಕಿ ಸವಿತಾ ಸುರೇಶ್ ಪೂಜಾರಿ ಇವರಿಗೆ ರೈತ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ವಿಜಯ ಬ್ಯಾಂಕ್ ನಿವೃತ್ತ ಪ್ರಭಂಧಕ ಪಂಜು ಪೂಜಾರಿ ಯಡಬೆಟ್ಟು,ಪಾಂಡೇಶ್ವರ ಗ್ರಾ.ಪಂ ಮಾಜಿ ಅಧ್ಯಕ್ಷೆ ಲೀಲಾವತಿ ಗಂಗಾಧರ್,ಬ್ರಹ್ಮಬೈದರ್ಕಳ ಗೋಳಿಗರಡಿ ಭಜನಾ ತಂಡದ ಮುಖ್ಯಸ್ಥೆ ಕುಸುಮಾ ಮನೋಜ್ ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ,ಸನ್ಮಾನಪತ್ರ ವಾಚಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು.
