ಕೋಟ: ಪಂಚವರ್ಣ ಸಂಸ್ಥೆಗೆ ಮಣೂರು ಫ್ರೆಂಡ್ಸ್ ರಜತ ಪುರಸ್ಕಾರ
ಕೋಟ: ಇಲ್ಲಿನ ಮಣೂರು ಫ್ರೆಂಡ್ಸ್ ಮಣೂರು ಇದರ ರಜತ ಸಂಭ್ರಮ ವಿಶೇಷ ಪುರಸ್ಕಾರಕ್ಕೆ ಕೋಟದ ಕ್ರೀಯಾಶೀಲ, ಪರಿಸರ ಸ್ವಚ್ಚತೆ ಹಾಗೂ ಪರಿಸರ ಪ್ರೇಮಿ ಸಂಘಟನೆಯಾದ ಪಂಚವರ್ಣ ಸಂಸ್ಥೆ ಆಯ್ಕೆಯಾಗಿದೆ.

1997ರಲ್ಲಿ ಸ್ಥಾಪನೆಗೊಂಡಿರುವ ಕೋಟದ ಪಂಚವರ್ಣ ಸಂಸ್ಥೆ ಕಳೆದ 29 ವರ್ಷಗಳಿಂದ ತನ್ನದೇ ಯುವಕರ ಬಳಗ ಹಾಗೂ ಯುವತಿಯರು ಮತ್ತು ಮಹಿಳೆಯರ ಸಂಘಟನೆ ಹೊಂದಿದೆ. ಪ್ರತೀ ವಾರ ವಿವಿಧ ಪ್ರದೇಶಗಳಲ್ಲಿ ಹಾಗೂ ಕಡಲ ತೀರ ಪ್ರದೇಶಗಳ್ಲಿ, ಹೆದ್ದಾರಿ, ರಸತೆಗಳ ಪಕ್ಕದಲ್ಲಿ ಪರಿಸರ ಸ್ವಚ್ಛತೆ, ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿ ಮಾಡುವ ಪ್ರಾಮಾಣಿಕ ಕೆಲಸ ಮಾಡುತ್ತಿದೆ. ಪ್ರತೀ ವಾರವೂ ಗೀತಾನಂದ ಪೌಂಡೇಶನ್ ಸಂಸ್ಥೆಯ ಸಹಕಾರದೊಂದಿಗೆ ಗಿಡ ನೆಡುವ ಕಾರ್ಯ ಮಾಡುತ್ತಿದೆ. ಸುಮಾರು ಮೂವತ್ತೂ ಸಾವಿರಕ್ಕೂ ಅಧಿಕ ಗಿಡಗಳನ್ನು ಈಗಾಗಲೇ ನಡೆಲಾಗಿದೆ.
ಇದೇ ಎಪ್ರಿಲ್ 1ರಂದು ಮಣೂರು ಮಹಾಲಿಂಗೇಶ್ವರ ದೇಗುಲದ ಜಾತ್ರೋತ್ಸವದ ಅಂಗವಾಗಿ ಹಮ್ಮಿಕೊಳ್ಳುವ ವೇದಿಕೆಯಲ್ಲಿ ರಜತ ಪುರಸ್ಕಾರ ನೀಡಿ ಗೌರವಿಸಲಿದೆ. ಇದೇ ಸಂದರ್ಭ ಪದ್ಮಶ್ರೀ ಡಾ.ಹರೇಕಳ ಹಾಜಬ್ಬರಿಗೆ ಸನ್ಮಾನ, ಹುಟ್ಟೂರ ಗೌರವಾಭಿನಂದನೆ, ವಿಶೇಷ ಅಭಿನಂದನೆ, ಪ್ರತಿಭಾ ಪುರಸ್ಕಾರ, ಸಂಘ ಸಂಸ್ಥೆಗೆ ಗೌರವ ಪುರಸ್ಕಾರ, ಅಶಕ್ತರಿಗೆ ಸಹಾಯಹಸ್ತ, ಆಶ್ರಮಕ್ಕೆ ನೆರವು, ಸಚಿನ್ ಆಚಾರ್ ಇವರ ಮೂನ್ ವಾಕಸ್೯ ಡಾನ್ಸ್ ಕ್ರಿವ್, ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಪ್ರಸಿದ್ಧ ಗಾಯಕರಿಂದ ಆರ್ಕೇಸ್ಟ್ರಾ ಕಾರ್ಯಕ್ರಮ ಜರಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
