Crime newsHighlightsLocal newsTrending

ಗಂಗೊಳ್ಳಿಯಲ್ಲಿ ಅಂಗಡಿಗೆ ನುಗ್ಗಿ 90ಸಾವಿರ ಹಣ ಮತ್ತು ಮೊಬೈಲ್ ಕಳವು

Aware others:

ಕುಂದಾಪುರ: ಭಾನುವಾರ ಸಂಜೆ ಅಂಗಡಿಯಲ್ಲಿ ಯಾರೂ ಇಲ್ಲದ ಸಂದರ್ಭ ನುಗ್ಗಿದ ಕಳ್ಳರು ನಗದು ಹಣ ಮತ್ತು ಮೊಬೈಲ್ ಕಳವು ಮಾಡಿದ ಘಟನೆ ಭಾನುವಾರ ಸಂಜೆ ಗಂಗೊಳ್ಳಿಯಲ್ಲಿ ನಡೆದಿದೆ. ಗಂಗೊಳ್ಳಿ ಜಾಮಿಯಾ ಸಂಕೀರ್ಣ ದಲ್ಲಿರುವ ಎಮ್.ಎಮ್ ಕಲೆಕ್ಷನ್ ಬಟ್ಟೆ ಹಾಗೂ ಪ್ಯಾನ್ಸಿ ಅಂಗಡಿಯಲ್ಲಿ ಕಳ್ಳರು ಕಳವು ಮಾಡಿ ಪರಾರಿಯಾಗಿದ್ದಾರೆ.

ಭಾನುವಾರ ಸಂಜೆ ಏಳು ಗಂಟೆ ಸುಮಾರಿಗೆ ಇಲ್ಲಿನ ಗಂಗೊಳ್ಳಿಯ ಮಾಲಿ ರಿಜ್ವಾನ್ (49) ಎಂಬುವರ ಫ್ಯಾನ್ಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಮಸೀದಿಗೆ ಪ್ರಾರ್ಥನೆ ಮಾಡಲೆಂದು ಹೊರಹೋಗಿದ್ದರು. ಇದೇ ಸಮಯದಲ್ಲಿ ಅಂಗಡಿಗೆ ನುಗ್ಗಿದ ಕಳ್ಳರು ಅಂಗಡಿಯ ಬಾಗಿಲು ತೆರೆದು, ಅಂಗಡಿ ಕ್ಯಾಶ್ ಕೌಂಟರ್ನಲ್ಲಿಟ್ಟಿದ್ದ 90 ಸಾವಿರ ನಗದು ಹಣ ಹಾಗೂ ಮೌಲ್ಯ 15 ಸಾವಿರ ಮೌಲ್ಯದ ನ್ನು ಮೊಬೈಲ್ ನ್ನು ಕದ್ದಿದ್ದಾರೆ. ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು, ಎಫ್ ಎಸ್ ಎಲ್ ಪರಿಣಿತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!