ಡ್ರಮ್ ನುಡಿಸಿದ ಪೇಜಾವರ ಸ್ವಾಮೀಜಿ
ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭ ಡ್ರಮ್ಮರ್ ಶಿವಮಣಿಯೊಂದಿಗೆ ಜುಗಲ್ ಬಂದಿ ನಡೆಸಿದ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು. ಉಡುಪಿ: ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಡ್ರಮ್ ನುಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಉಡುಪಿಯ ಪೆರ್ಣಂಕಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ನಿಮಿತ್ತ ಸೋಮವಾರ ರಾತ್ರಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡ್ರಮ್ಮರ್ ಶಿವಮಣಿ ಅವರ ಕಾರ್ಯಕ್ರಮ ವೀಕ್ಷಿಸಲು ಶ್ರೀಗಳು ಆಗಮಿಸಿದ್ದರು. ವೇದಿಕೆ ಮೇಲೇರಿದ ಶ್ರೀಗಳು, ಲಯಬದ್ಧವಾಗಿ ಡ್ರಮ್ ನುಡಿಸುವ ಮೂಲಕ ಜನರನ್ನು ರೋಮಾಂಚನಗೊಳಿಸಿದರು. ಬಳಿಕ ಶಿವಮಣಿ ಅವರೊಂದಿಗೆ ಜುಗಲ್‌ಬಂದಿ ನಡೆಸಿದರು.
