ಕುಂದಾಪುರ: ಹನಿಟ್ರ್ಯಾಪ್ ಬಲೆಗೆ ಬಿದ್ದ ಕಾಸರಗೋಡು ವ್ಯಕ್ತಿ – ಮುಸ್ಲಿಂ ಮಹಿಳೆ ಸಹಿತ ಆರು ಆರೋಪಿಗಳ ಬಂಧನ
ಕುಂದಾಪುರ: ಇಲ್ಲಿನ ಮೂಡು ಗೋಪಾಡಿ ಎಂಬಲ್ಲಿ ಹನಿಟ್ರ್ಯಾಪ್ ಜಾಲ ಬೆಳಕಿಗೆ ಬಂದಿದ್ದು, ಮಹಿಳೆ ಸಹಿತ ಆರು ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಕಾಸರಗೋಡಿನವನಾದ ಸಂತ್ರಸ್ಥ ಸುಧೀರ್ ಎಂಬಾತ ಈ ಹಿಂದೆ ಹಲವು ಬಾರಿ ಇಸ್ಪೀಟ್ ಆಡಲೆಂದು ಕುಂದಾಪುರಕ್ಕೆ ಬರುತ್ತಿದ್ದ. ಹೀಗೆ ಬಂದಾಗ ಮೂಡುಗೋಪಾಡಿಯ ಮುಸ್ಲಿಂ ಮಹಿಳೆ ಸಂಪರ್ಕವಾಗಿದ್ದಾಳೆ. ಬಳಿಕ ಆರೋಪಿ ಮಹಿಳೆ ನಿನ್ನೆ ಅಂದರೆ ಮಂಗಳವಾರ ರಾತ್ರಿ ತನ್ನ ಮನೆಯಾದ ಮೂಡುಗೋಪಾಡಿಗೆ ಸುಧೀರನನ್ನು ಬರಹೇಳಿದ್ದಾಳೆ. ಆರೋಪಿ ಹೇಳಿದ ಮನೆಗೆ ಸುಧೀರ್ ಹೋಗಿದ್ದಾನೆ. ಮನೆಗೆ ಹೋದ ಬಳಿಕ ಮಹಿಳೆ ಬಾಗಿಲು ಹಾಕಿಕೊಂಡಿದ್ದು ತನ್ನ ಸಹಚರರಿಗೆ ಬರಲು ಹೇಳಿದ್ದಾಳೆ. ಅದರಂತೆ ಇತರ ಐವರು ಆರೋಪಿಗಳು ಆಕೆಯ ಮನೆಯೊಳಗೆ ಬಂದಿದ್ದು, ವಿಡಿಯೋ ಮಾಡಿ ಬ್ಲ್ಯಾಕ ಮೇಲ್ ಮಾಡಿದ್ದಾರೆ. ಬಳಿಕ ಸಂತ್ರಸ್ಥ ಸುಧೀನ ಬಳಿಯಿದ್ದದ್ದೆಲ್ಲವನ್ನೂ ದೋಚಿ ಇನ್ನೂ ಹೆಚ್ಚಿನ ಹಣಕ್ಕಾಗಿ ಬೇಡಿಕೆಯಿಟ್ಟು ಪೊಲೀಸರಿಗೆ ಹೇಳಿದರ ಕೊಲೆ ಮಾಡುವುದಾಗಿ ಬೆದರಿಸಿ ಕಳಿಸಿದ್ದಾರೆ ಎನ್ನಲಾಗಿದೆ.
ದಿಕ್ಕುಕಾಣದಾದ ಸುಧೀರ್ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿ ಕಿಂಗ್ ಪಿನ್ ಮಹಿಳೆ ಸಹಿತ ಆರು ಜನರನ್ನು ಬಂಧಿಸಿದ್ದಾರೆ. ಇದೀಗ ಆರೋಪಿಗಳ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.
