BlogHealthHighlightsHuman storiesLifestyleLocal newsOthersSportsState newsSuccess storiesTop StoriesTrending

ಮಿಸ್ಟರ್ ಕರ್ನಾಟಕ ಚಾಂಪಿಯನ್ಸ್ ಆಫ್ ಚಾಂಪಿಯನ್ ಆಗಿ ಗುಜ್ಜಾಡಿಯ ಅಮಿತ್ ಪಿ. ಮೇಸ್ತ

Aware others:

ಕುಂದಾಪುರ: ಬೆಂಗಳೂರಿನಲ್ಲಿ ನಡೆದ  ಮಿಸ್ಟರ್ ಕರ್ನಾಟಕ ದೇಹದಾರ್ಡ್ಯ (ಬಾಡಿಬಿಲ್ಡಿಂಗ್) ಸ್ಪರ್ಧೆಯಲ್ಲಿ, ಕುಂದಾಪುರ ಗುಜ್ಜಾಡಿ ಗ್ರಾಮದ ಜ್ಯೋತಿ ಪ್ರಕಾಶ್ ಮೇಸ್ತ ಅವರ ಪುತ್ರರಾದ ಅಮಿತ್ ಪಿ. ಮೇಸ್ತ ಅವರು ಚಾಂಪಿಯನ್ಸ್ ಆಫ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 

2025ರ ಆಗಸ್ಟ್ 24 ರಂದು ಬೆಂಗಳೂರು ನಗರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಅಮಿತ್ ಪಿ. ಮೇಸ್ತ ಅವರು  ಮಿಸ್ಟರ್ ಕರ್ನಾಟಕ ಕಿರೀಟ ಧರಿಸಿದ್ದಾರೆ.

ಮೆನ್ಸ್ ಫಿಸಿಕ್ (Men’s Physique) ಹಾಗೂ ಕ್ಲಾಸಿಕ್ ಫಿಸಿಕ್ (Classic Physique) ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದಾರೆ. ಅಲ್ಲದೆ ದೇಹದಾರ್ಡ್ಯ (Body Building) ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದು ಚಾಂಪಿಯನ್ಸ್ ಆಫ್ ಚಾಂಪಿಯನ್  ಕಿರೀಟ ಪಡೆದು ಮಿಸ್ಟರ್ ಕರ್ನಾಟಕ 2025 ಪ್ರತಿಷ್ಟಿತ ಸ್ಥಾನ ಪಡೆದರು.

ಅಮಿತ್ ಮೇಸ್ತ ಪ್ರಸ್ತುತ ಬೆಂಗಳೂರಿನಲ್ಲಿದ್ದು, ಪೈಪಿಂಗ್ ರಾಕ್ ಎನ್ನುವ ಯುಎಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿರುವ ಇವರು ಬೆಳಿಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ತರಬೇತಿ ಕೇಂದ್ರವೊಂದರಲ್ಲಿ ಜಿಮ್ ಟ್ರೈನಿಂಗ್ ಕೊಡುತ್ತಾರೆ. ಬಳಿಕ 11.30 ಗಂಟೆಯಿಂದ ಮಧ್ಯಾಹ್ನ 1.30ರವರಗೆ ಸ್ವತಃ ಅಭ್ಯಾಸ ಮಾಡ್ತಾರೆ. ಕೋಚ್ ಪಿಟ್ ಲ್ಯಾಬ್ ನ ನಿಶಾನ್ ತರಬೇತಿ ನೀಡುತ್ತಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಬಾಡಿ ಬಿಲ್ಡಿಂಗ್ ತರಬೇತಿ ಪಡೆಯುತ್ತಿರುವ ಅಮಿತ್ ಮೇಸ್ತ ಅವರು, ಎರಡು ವರ್ಗಳಿಂದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಅತೀ ಕಡಿಮೆ ಅವಧಿಯಲ್ಲಿ ಮಿಸ್ಟರ್ ಕರ್ನಾಟಕಬಮತ್ತಿ ಚಾಂಪಿಯನ್ಸ್ ಆಫ್ ಚಾಂಪಿಯನ್ ಬಿರುದು ಉಡುಪಿ ಜಿಲ್ಲೆಗೆ ಹೆಮ್ಮೆ ತಂದಿದೆ.

ನಾನು ಚಾಂಪಿಯನ್ ಆಗಬೇಕು ಎನ್ನುವುದು ನನ್ನ ತಾಯಿಯ ಕನಸಾಗಿತ್ತು. ಆದರೆ 2018ರಲ್ಲಿ ನನ್ನ ತಾಯಿ ತೀರಿಕೊಂಡರು. ಅವರ ಕನಸನ್ನು ನನಸು ಮಾಡಿದ ಹೆಮ್ಮೆ  ಇದೆ. ಮುಂದಕ್ಕೂ ನನ್ನ ಸಾಧನೆಯ ಪ್ರಯತ್ನ ಮುಂದುವರೆಯುತ್ತದೆ ಎಂದು ಅಮಿತ್ ಮೇಸ್ತ ಹೇಳಿದ್ದಾರೆ. ಕರಾವಳಿಯ ಕುವರ ದೇಹದಾರ್ಡ್ಯ ಸಾಧನೆಯಲ್ಲಿ ಇನ್ನಷ್ಟು ಎತ್ತರಕ್ಕೇರಲಿ ಎಂದು ಆಶಿಸೋಣ.


Aware others:

Leave a Reply

Your email address will not be published. Required fields are marked *

error: Content is protected !!