ಬೆಂಗಳೂರಿನಲ್ಲಿ ನಡೆದ ಅಂತರ್ರಾಷ್ಟ್ರೀಯ ಆರಿ ಕೃತಿಯಲ್ಲಿ ವಿಶ್ವದಾಖಲೆ ಬರೆದ ಅಶ್ವಿನಿ ಸತೀಶ್ ಖಾರ್ವಿ


ಕುಂದಾಪುರ: ಬೆಂಗಳೂರಿನಲ್ಲಿ ನಡೆದ ಎರಡನೇಯ ಅಂತರ್ರಾಷ್ಟ್ರೀಯ ಆರಿ ಕಾರ್ಮಿಕರ ಸಮ್ಮೇಳನ – 2025 ವತಿಯಿಂದ ಹಮ್ಮಿಕೊಳ್ಳಲಾದ ಒಂದೂವರೆ ಗಂಟೆಗಳ ಸೀಮಿತ ಅವಧಿಯ ಆರೀ ಕೃತಿ ರಚನೆಯ ಸ್ಪರ್ಧೆಯಲ್ಲಿ ಕುಂದಾಪುರದ ನ್ಯೂ ಹರ್ಕ್ಯೂಲಸ್ ಜಿಮ್ ಮಾಲಕ, ಅಂತಾರ್ರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ ಅವರ ಪತ್ನಿ ಅಶ್ವಿನಿ ಸತೀಶ್ ಖಾರ್ವಿ ಅವರು ಪ್ರಥಮ ಸ್ಥಾನ ಪಡೆಯುವುದರ ಜೊತೆಗೆ ವಿಶ್ವ ದಾಖಲೆ ಹಾಗೂ ಆಸ್ಕರ್ ದಾಖಲೆ ಬರೆದಿದ್ದಾರೆ.






ಆಗಸ್ಟ್ 10ರಂದು ಅಂತರ್ರಾಷ್ಟ್ರೀಯ ಆರಿ ಕಾರ್ಮಿಕರ ಸಮ್ಮೇಳನ ಆಯೋಜಿಸಲಾಗಿತ್ತು. ಸಮ್ಮೇಳನದ ಪ್ರಯುಕ್ತ ಮಹಿಳಾ ಸ್ವಾತಂತ್ರ್ಯ ಎಂಬ ವಿಷಯದಲ್ಲಿ ಮಹಿಳೆಯರಿಗಾಗಿ ಒಂದೂವರೆ ಗಂಟೆಗಳ ಸೀಮಿತ ಅವಧಿಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ನೂರಾರು ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಗರಿಷ್ಠ ಸಂಖ್ಯೆಯ ಆರಿ ಕೃತಿ ವಿನ್ಯಾಸ ನಿರ್ವಹಿಸಿದ ಅಶ್ವಿನಿ ಸತೀಶ್ ಖಾರ್ವಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅಶ್ವಿನಿ ಸತೀಶ್ ಖಾರ್ವಿ ಕುಂದಾಪುರದ ಆರತಿ ರಾಜ್ ಟ್ರೈನಿಂಗ್ ಸೆಂಟರ್ ಕುಂದಾಪುರ ಇವರಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.