ಬೈಕಿಗೆ ಲಾರಿ ಢಿಕ್ಕಿ – ಸವಾರ ಸಾವು
ಕುಂದಾಪುರ: ಬುಧವಾರ ಸಂಜೆ (ಜುಲೈ 24) ಲಾರಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ್ದಾನೆ. ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಾಪುರ ತಾಲೂಕಿನ, ಕೆರಾಡಿ ಗ್ರಾಮದ ಚಪ್ಪರ್ಕ ಕೋಣ್‌ಬೇರು ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ರೋಧಿಲಾಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಘಟನೆ ವಿವರ: ರೋಧಿಲಾಲ್ ತನ್ನ ಬೈಕಿನಲ್ಲಿ ಕೆರಾಡಿ ಕಡೆಯಿಂದ ಕಾರಿಬೈಲು ಕಡೆಗೆ ಪ್ರಯಾಣಿಸುತ್ತಿದ್ದರು ಇದೇ ಸಂದರ್ಭ ಕೆರಾಡಿ ಕಡೆಗೆ ಗುಂಡು ಎಂಬಾತ ಚಲಾಯಿಸುತ್ತಿದ್ದ ಅನ್ನ ಭಾಗ್ಯ ಯೋಜನೆಯ ಲಾರಿ ಎದುರುಗಡೆಯಿಂದ ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದ ಬೈಕ್ ಸವಾರ ರೋಧಿಲಾಲ್ ತಲೆಯ ಮೇಲೆ ಲಾರಿಯ ಚಕ್ರ ಹರಿದ ಪರಿಣಾಮ ಬೈಕ್ ಚಾಲಕ ರೋಧಿ ಲಾಲ್ ದಾರುಣವಾಗಿ ಸಾವನ್ನಪ್ಪಿದ್ದಾನೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.