ವಡ್ಡರ್ಸೆ: ಬಿಜೆಪಿ ಸುಳ್ಳಿಗೆ ಕಾಂಗ್ರೆಸ್ ಸತ್ಯ ದರ್ಶನ ಪ್ರತಿಭಟನೆ


ಕುಂದಾಪುರ: ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಜನತೆಗೆ ಮಾಡಿದ ಅನ್ಯಾಯಗಳನ್ನು ಕಾಂಗ್ರೆಸ್ ತಲೆಗೆ ಕಟ್ಟುತ್ತಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾದ ಸತ್ಯದರ್ಶನ ಸಪ್ತಾಹದ ಅಂಗವಾಗಿ ವಡ್ಡರ್ಸೆ ಗ್ರಾಮ ಪಂಚಾಯತ್ ಆವರಣದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.

ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಚಂದ್ರ ಶೆಟ್ಟಿ ನೇತೃತ್ವದಲ್ಲಿ ನಡೆದ ಈ ಕಾಂಗ್ರೆಸ್ ಸತ್ಯದರ್ಶನ ಕಾರ್ಯಕ್ರಮದಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ. ಕುಂದರ್, ರಾಜ್ಯ ಕಾಂಗ್ರೆಸ್ ನಾಯಕ ಯುವ ವಾಗ್ಮಿ ಅಮೃತ್ ಶೆಣೈ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ (ವಡ್ಡರ್ಸೆ), ಮುಖಂಡರಾದ ಸುರೇಶ್ ಶೆಟ್ಟಿ ಕಾವಡಿ, ಸುನಿಲ್ ಶೆಟ್ಟಿ ಕಾವಡಿ, ಗೋಪಾಲ ಕಾಂಚನ ಕಾವಡಿ, ಮಾಜಿ ಪಂಚಾಯತ್ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಆಚಾಲಾಡಿ, ಬಾಬು ಪೂಜಾರಿ, ದಿನೇಶ್ ಬಂಗೇರ, ಶ್ಯಾಮರಾಜ್ ಶೆಟ್ಟಿ ಯಾಳಹಕ್ಳು, ಶೇಖರ್ ಶೆಟ್ಟಿ ಯಾಳ ಹಕ್ಳು, ಶಿರಿಯಾರ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ನಿರ್ದೇಶಕ ಸುರೇಂದ್ರ ಶೆಟ್ಟಿ, ಪಂಚಾಯತ್ ಸದಸ್ಯರಾದ ಚಂದ್ರ ಶೆಟ್ಟಿ ಅಚಾಲಾಡಿ ಮತ್ತು ಜಯಲಕ್ಷ್ಮಿ ಆಚಾರಿ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಯುವ ನಾಯಕರಾದ ಪ್ರದೀಪ್ ಕೊತ್ತಾಡಿ, ಶಶಿ ಉಪ್ಲಾಡಿ, ರಾಘು, ಮಹಾಬಲ ಕಾವಡಿ ಮೊದಲಾದವರು ಭಾಗವಹಿಸಿದ್ದರು.