ಕುಂದಾಪುರ: ಸರಸ್ವತಿ ವಿದ್ಯಾಲಯದಲ್ಲಿ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ

ಕುಂದಾಪುರ: ಕುಂದಾಪುರ ತಾಲೂಕಿನ ಸಿದ್ಧಾಪುರದ ಸರಸ್ವತಿ ವಿದ್ಯಾಲಯಲದಲ್ಲಿ ಶನಿವಾರ (ಇಂದು) ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ನಡೆಸಲಾಯಿತು.


ನಿವೃತ್ತ ಪ್ರೊಫೆಸರ್ ಡಾ.ಶ್ರೀಕಾಂತ್ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜ್ಯ ಮಟ್ಟದ ಬಾಲ ಯೋಗ ಪಟು, ನಾಲ್ಕನೇ ತರಗತಿಯ ಆಧೀಶ್ ಗಾಣಿಗ ಪ್ರಾತ್ಯಕ್ಷಿಕೆ ನೀಡಿದರು.


ಈ ಸಂದರ್ಭ ಜ್ಞಾನಸರಸ್ವತಿ ಪಿ. ಯು ಕಾಲೇಜ್ ನ ಪ್ರಾಂಶುಪಾಲ ಅಮರೇಶ್ ಹೆಗ್ಡೆ, ಸರಸ್ವತಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ವೇತಾ ಉಪಸ್ಥಿತರಿದ್ದರು.


ಶಿಕ್ಷಕಿ ಶ್ವೇತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅನುಷಾ ಶೆಟ್ಟಿ ವಂದಿಸಿದರು.
