ಹಟ್ಟಿಯಂಗಡಿ: ಶ್ರೀ ಸಿದ್ಧಿವಿನಾಯಕ ವಸತಿಶಾಲೆಗೆ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್

ಕುಂದಾಪುರ: ಇತ್ತೀಚೆಗೆ ಗಿನ್ನೆಸ್ ವಿಶ್ವದಾಖಲೆ ಬರೆದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿಶಾಲೆಗೆ ಬ್ರೈನ್ ಪೀಡ್ ಸಂಸ್ಥೆಯವರು ಕೊಡಮಾಡುವ ಅತ್ಯುತ್ತಮ ಸಹಪಠ್ಯ ಚಟುವಟಿಕೆಗಳು, ಅತ್ಯುತ್ತಮ ಬೋರ್ಡಿಂಗ್ ಶಾಲೆ, ಶಿಕ್ಷಣದಲ್ಲಿ ಜೀವನ ಕೌಶಲ್ಯಗಳ ಸಹಭಾಗಿತ್ವ ಈ ಮೂರು ಪ್ರತಿಷ್ಠಿತ ಶ್ರೇಣಿಗಳಲ್ಲಿ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್ಸ್ ದೊರಕಿದೆ.
ಹೈದ್ರಾಬಾದ್‌ನ ಹಿಟೆಕ್ಸ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಯೋಜಕಿ ಸವಿತಾ ಭಟ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲ ಶರಣಕುಮಾರ ಪ್ರಶಸ್ತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.