ಕುಂದಾಪುರ: ಅಂತರಾಷ್ಟ್ರೀಯ ಯೋಗ ಸ್ಪರ್ಧೆಗೆ ಧನ್ವಿ ಪೂಜಾರಿ ಮರವಂತೆ ಆಯ್ಕೆ
ಕುಂದಾಪುರ: ಡಿಸೆಂಬರ್ 13ರಂದು ಥಾಯ್ಲೆಂಡ್ ನಲ್ಲಿ ನಡೆಯುವ ಅಂತರ್ರಾಷ್ಟ್ರೀಯ ಮಟ್ಟದ ವರ್ಷಿಣಿ ಯೋಗ ಎಜ್ಯುಕೇಷನ್ ಆಂಡ್ ಕಲ್ಚರಲ್ ಸ್ಪೋರ್ಟ್ಸ್ ಟ್ರಸ್ಟ್. ರಿ. ಶಿವಮೊಗ್ಗ ಇವರ ವತಿಯಿಂದ ಆಯೋಜಿಸಿರುವ ಅಂತಾರಾಷ್ಟ್ರೀಯ ಯೋಗ ಚಾಂಪಿಯನ್ ಶಿಫ್ ಸ್ಪರ್ಧೆಗೆ ಧನ್ವಿ ಮರವಂತೆ ಆಯ್ಕೆಯಾಗಿದ್ದಾರೆ.


ಪ್ರಥಮ ಪಿಯು (ವಿಜ್ಞಾನ) ಓದುತ್ತಿರುವ ದನ್ವಿ ಮರವಂತೆ ಯೋಗ ಸಾಧಕಿಯಾಗಿದ್ದು, ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇವರು ಮರವಂತೆ ಜ್ಯೋತಿ ಚಂದ್ರಶೇಖರ್ ಅವರ ಪುತ್ರಿ. ಧನ್ವಿ ಮರವಂತೆ ಚಾಂಪಿಯನ್ ಆಗಿ ಗೆದ್ದು ಬರಲಿ ಎಂದು ಈ ಸಂದರ್ಭದಲ್ಲಿ ವಾಸ್ತವ. ಕಾಂ. ಹಾರೈಸುತ್ತದೆ.