AccidentBlogCrime newsHealthHighlightsHuman storiesLifestyleLocal newsNational NewsObituaryOthersState newsTop StoriesTrending

ಹೆಮ್ಮಾಡಿ: ಮೊವಾಡಿ ಅಪಘಾತಕ್ಕೆ ಎಂಟು ವರ್ಷ! – ಮಕ್ಕಳನ್ನು ಕಳೆದುಕೊಂಡ ತಾಯಿಯೂ‌ ನಿಧನ

Aware others:

ದೇವರೇ, ಇಂಥಾ ಕಷ್ಟ ಯಾರಿಗೂ ಕೊಡಬೇಡ

ಕುಂದಾಪುರ: ಇಡೀ ರಾಜ್ಯವೇ ಆ‌ ದಿನ‌ ಬೆಳಿಗ್ಗೆ ಬೆಚ್ಚಿ ಬಿದ್ದಿತ್ತು. ಶಾಲೆಗೆ ಹೊರಟಿದ್ದ ಪುಟಾಣಿ ಮಕ್ಕಳ ಪೈಕಿ ಓಮ್ನಿ ಕಾರಿನಲ್ಲಿದ್ದ 8 ಮಕ್ಕಳು ಸೇರಿದಂತೆ 12 ಜನ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದರು. ಇಬ್ಬರು ಒಂದೇ ಕುಟುಂಬದ ಒಂದೇ ತಾಯಿಯ ಮಕ್ಕಳು. ಇಬ್ಬರೂ ಮಕ್ಕಳನ್ನು ಕಳೆದುಕೊಂಡ ತಾಯಿ‌ ಎಂಟು ವರ್ಷದ ಬಳಿಕ ಗರ್ಭಕೋಶದ ಖಾಯಿಲೆಯಿಂದ ಮೃತಪಟ್ಟಿದ್ದಾರೆ.

ಹೆಮ್ಮಾಡಿಯ ನಿವಾಸಿ ಕುಂದಾಪುರ ಓಯಾಸಿಸ್ ಎಲೆಕ್ಟ್ರಾನಿಕ್ ಮಳಿಗೆಯ ಮಾಲಕ ಲಾಯ್ಡ್ ಡಿ’ಸಿಲ್ವಾ ಇವರ ಧರ್ಮಪತ್ನಿ ಮರಿನಾ ಡಿ’ಸಿಲ್ವಾ ಅಕ್ಟೋಬರ್ 14ರಂದು ನಿಧನರಾಗಿದ್ದಾರೆ.

ಲಾಯ್ಡ್ ಹಾಗೂ ಮರಿನಾ ದಂಪತಿಗಳು ಹೆಮ್ಮಾಡಿಯಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಮಕ್ಕಳಾದ ನಿಖಿತ್ ಮತ್ತು ಅನನ್ಯ ಎಂಬುವರನ್ನು ಕಳೆದುಕೊಂಡಿದ್ದರು. ಬಳಿಕ ತಾಯಿ ಮರೀನಾ ಒಂದು ಕಿಡ್ನಿಯನ್ನು ದಾನ ಮಾಡಿದ್ದರು. ಬಳಿಕ ಅಂಕಿತಾ ಮತ್ತು ನಿಖಿತಾ ಎಂಬ ಇಬ್ಬರು ಮಕ್ಕಳಾದ ಮೇಲೆ ಗರ್ಭಕೋಶದ ಸಮಸ್ಯೆಯೂ ಶುರುವಾಯಿತು. ಎರಡು ಮಕ್ಕಳನ್ನು ಕಳೆದುಕೊಂಡಿದ್ದ ದುಃಖ ಒಂದೆಡೆಯಾದರೆ, ಗರ್ಭಕೋಶದ‌ ಸಮಸ್ಯೆ ಮತ್ತೊಂದೆಡೆ. ದೇವರೇ ಇಂತಾ ಕಷ್ಟ ಯಾರಿಗೂ ಕೊಡಬೇಡ.

ಮೃತ ಮರೀನಾ ಅವರ ಅಂತ್ಯಕ್ರಿಯೆ ಇಂದು (ಅ.16) ಸಂಜೆ 4 ಗಂಟೆಗೆ ತಲ್ಲೂರಿನ ಚರ್ಚಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲ ತಿಳಿಸಿದೆ.


Aware others:

Leave a Reply

Your email address will not be published. Required fields are marked *

error: Content is protected !!