ಕುಂದಾಪುರ: ಇಂಟರ್ ನ್ಯಾಷನಲ್ ಮುಕ್ತ ಕರಾಟೆ – ಅಮೈರಾ ಪ್ರಥಮ
ಕುಂದಾಪುರ : ಶಿವಮೊಗ್ಗದಲ್ಲಿ ಆಗಸ್ಟ್ 4ರಂದು ಆಯೋಜಿಸಲಾದ ಇಂಟರ್ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಸ್ಪರ್ಧೆಯ ಕಟಾ ಮತ್ತು ಕುಮಿಟೆಯ 8ವರ್ಷ ವಯೋಮಿತಿಯಲ್ಲಿ ಕುಂದಾಪುರದ ಅಮೈರಾ ಶೋಲಾಪುರ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.


ಕುಂದಾಪುರದ ಓಕ್ ವುಡ್ ಇಂಡಿಯನ್ ಸ್ಕೂಲ್ ನ 4ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಯಾಸೀನ್ ಶೋಲಾಪುರ ಹಾಗೂ ರಝಿಯಾ ಸುಲ್ತಾನ ದಂಪತಿಗಳ ಪುತ್ರಿಯಾಗಿದ್ದಾಳೆ. ಕುಂದಾಪುರ ಕೆಡಿಎಫ್ ಅಕಾಡೆಮಿಯ ಕಿಯೊಷಿ ಕಿರಣ್,ಶಿಹಾನ್ ಸಂದೀಪ್,ಸಿಹಾನ್ ಶೇಕ್ ಮತ್ತು ಶಶಾಂಕ್ ಇವರಿಂದ ತರಬೇತಿ ಪಡೆಯುತ್ತಿದ್ದಾಳೆ.
