AccidentBlogCrime newsLocal newsOthersState newsTop StoriesTrending

ಖಾಸಗಿ ಬಸ್ ಡಿಕ್ಕಿ : ವೃದ್ಧ ಪಾದಾಚಾರಿ ಸಾವು

Aware others:

ಅಪಘಾತದಲ್ಲಿ ಸಾವನ್ನಪ್ಪಿದ ರಾಮ ಮಡಿವಾಳ

ಕೋಟ: ರಸ್ತೆ ಬದಿಯಲ್ಲಿ ನಿಂತಿದ್ದ ಪಾದಾಚಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ 8 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕನ್ನುಕೆರೆ ಎಂಬಲ್ಲಿರುವ ಪ್ರೆಸಿಡೆಂಟ್ ಕನ್ವೇಷನ್ ಹಾಲ್ ಎದುರುಗಡೆ ನಡೆದಿದೆ. ಕನ್ನುಕೆರೆ ರಾಮ ಮಡಿವಾಳ (60) ಎಂಬುವರೇ ಅಪಘಾತದಲ್ಲಿ ಸಾವನ್ನಪ್ಪಿದವರು. ನಡೆದಿದೆ.


ರಾಮ ಮಡಿವಾಳ ರಸ್ತೆ ಬದಿಯಲ್ಲಿ ತನ್ನ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಆ ಸಂದರ್ಭ ಹಿಂದಿನಿಂದ ಬಂದ ಉಡುಪಿಯಿಂದ ಕುಂದಾಪುರಕ್ಕೆ ಹೋಗುತ್ತಿದ್ದ ಖಾಸಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರಾಮ ಮಡಿವಾಳ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!