BlogCrime newsHighlightsLocal newsOthersState newsTrending

ಸಿದ್ಧಾಪುರ: ಮಧ್ಯರಾತ್ರಿ ಶಾರ್ಟ್ ಸರ್ಕ್ಯೂಟ್ ಶಂಕೆ!? : ಮೂರು ಅಂಗಡಿಗಳು ಬೆಂಕಿಗಾಹುತಿ

Aware others:

ಕುಂದಾಪುರ: ಸೋಮವಾರ ತಡರಾತ್ರಿ ಬೆಂಕಿ ಆಕಸ್ಮಿಕಕ್ಕೆ ಒಂದೇ ಕಟ್ಟಡದಲ್ಲಿದ್ದ ಮೂರು ಅಂಗಡಿಗಳು ಸಂಪೂರ್ಣ ಸುಟ್ಟು ಹೋದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಕುಂದಾಪುರ ತಾಲೂಕಿನ ಸಿದ್ಧಾಪುರ ಪೇಟೆಯಲ್ಲಿ ನಡೆದಿದೆ. ಸಿದ್ಧಾಪುರ ಪೇಟೆಯಲ್ಲಿದ್ದ ಪ್ರಸಿದ್ಧ ರಾಮನಾಥ್ ಸ್ಟೋರ್ಸ್ ಎಂಬ ಹೆಸರಿನ ಸ್ಪೇರ್ ಪಾರ್ಟ್ಸ್ ಅಂಗಡಿ, ಪಕ್ಕದಲ್ಲಿದ್ದ ನಂದಿನಿ ಮಿಲ್ಕ್ ಪಾರ್ಲರ್ ಹಾಗೂ ಮೇಲಿನ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಬ್ಯೂಟಿ ಪಾರ್ಲರ್ ಬೆಂಕಿಗಾಹುತಿಯಾಗಿರುವ ಅಂಗಡಿಗಳು.

ಸೋಮವಾರ ತಡರಾತ್ರಿ ಘಟನೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದ್ದು, ಬೆಂಕಿಯ ಕೆನ್ನಾಲಿಗೆಗಗಳು ಆಕಾಶದೆತ್ತರಕ್ಕೆ ಹಬ್ಬಿಕೊಂಡಾಗ ಘಟನೆ ಅರಿವಿಗೆ ಬಮದಿದೆ. ತಕ್ಷಣ ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದೆಯಾದರೂ ಅದಾಗಲೇ ಇಡೀ ಕಟ್ಟಡ ಸಂಪೂರ್ಣ ಹೊತ್ತಿ ಉರಿದಿದೆ. ಸುಮಾರು 60 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲವಾದರೂ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.


Aware others:

Leave a Reply

Your email address will not be published. Required fields are marked *

error: Content is protected !!