BlogAccidentCrime newsHighlightsLocal newsObituaryOthersState newsTrending

ಕುಂದಾಪುರದ ಇಬ್ಬರು ಬಾಲಕರು ಹೊಳೆಹೊನ್ನೂರು ಭದ್ರಾ ಕಾಲುವೆಗೆ ಬಿದ್ದು ಸಾವು

Aware others:

ಶಿವಮೊಗ್ಗ: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ಹೊಳೆಹೊನ್ನೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಗುಡಮಗಟ್ಟೆ ಚಾನಲ್‌ ಗೆ ಬಿದ್ದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಮೃತ ಬಾಲಕರನ್ನು ರಜತ್‌ (10) ಹಾಗೂ ರೋಹನ್‌ (15) ಎಂದು ಗುರುತಿಸಲಾಗಿದೆ.

ಬಾಲಕರು ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ  ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದರು. ಸೋಮವಾರ ಸಂಜೆ 3.30-4.00 ಗಂಟೆ ಸುಮಾರಿಗೆ ಹೊಳೆಹೊನ್ನೂರಿನ ಆನವೇರಿ ಸಮೀಪದ ಗುಡಮಗಟ್ಟೆಯಲ್ಲಿರುವ ಭದ್ರಾ ಚಾನಲ್‌ ಬಳಿ ಬಂದಿದ್ದಾರೆ. ಚಾನಲ್‌ ಏರಿ ಮೇಲೆ ಬಂದ ಇಬ್ಬರು ಬಾಲಕರ ಪೈಕಿ ಚಿಕ್ಕವನು ನೀರಿಗಿಳಿದಿದ್ದಾನೆ. ಆದರೆ ನೀರಿನ ಸೆಲೆಯಲ್ಲಿ ಆತ ಈಜಲಾಗದೇ ಮುಳಗಲು ಆರಂಭಿಸಿದ್ದಾನೆ. ಆತನನ್ನು ರಕ್ಷಿಸಲು ಇನ್ನೊಬ್ಬನು ನೀರಿಗಿಳಿದಿದ್ದು, ಆತನೂ ಸಹ ಚಾನಲ್‌ನಲ್ಲಿ ಮುಳುಗಿದ್ದಾನೆ. 

ವಿಷಯ ತಿಳಿಯುತ್ತಲೇ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಸ್ಥಳದಲ್ಲಿ ಬಟ್ಟೆ ಮಾತ್ರ ಪತ್ತೆಯಾಗಿದ್ದರಿಂದ ಅನುಮಾನ ಸಹ ಮೂಡಿಸಿತ್ತು. ತೀವ್ರ ಹುಡುಕಾಟದ ಬಳಿಕ ರಾತ್ರಿ 9.30 ರ ಸುಮಾರಿಗೆ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶವ ಮಹಜರು ನಡೆಸಿ, ಬಳಿಕ ಬಾಲಕರ ಮೃತದೇಹವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!