AccidentBlogCrime newsLocal newsOthersTrending

ಕೋಟದಲ್ಲಿ ನಿಯಂತ್ರಣ ತಪ್ಪಿ ಬೈಕ್ ಪಲ್ಟಿ – ಸವಾರ ಸಾವು

Aware others:

ಕೋಟ: ರಾಷ್ಟ್ರೀಯ ಹೆದ್ದಾರಿ 66ರ  ಕೋಟ ಮಸೀದಿ ಸಮೀಪ ಮಂಗಳವಾರ ಮುಂಜಾನೆ ಬೈಕೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.  ಕೋಟ ಮಣೂರು ನಿವಾಸಿ ಸುರೇಶ್ ಆಚಾರ್ಯ  ಅವರ ಮಗ ವಿಕಾಸ್ ಆಚಾರ್ಯ (22) ಸಾವನ್ನಪ್ಪಿದ ಬೈಕ್ ಸವಾರ.

CREATOR: gd-jpeg v1.0 (using IJG JPEG v62), default quality

ವಿಕಾಸ್ ಸೋಮವಾರ ರಾತ್ರಿ ಸುಮಾರು 1.30ಕ್ಕೆ ಸಾಸ್ತಾನ ದಿಂದ ಕೋಟ ಮಣೂರು ಕಡೆ ಬರುತ್ತಿದ್ದರು. ಕೋಟದ ಗುಜುರಿ ಅಂಗಡಿ ಸಮೀ ಬರುತ್ತಿದ್ದಂತೆ ಬೈಕ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಅಪಘಾತದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಸವಾರ ವಿಕಾಸ್ ಆಚಾರ್ಯ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.  ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!